alex Certify ರೈತರಿಗೆ ಗುಡ್ ನ್ಯೂಸ್: ಆದಾಯ ದ್ವಿಗುಣಗೊಳಿಸಲು ಮತ್ತೊಂದು ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಆದಾಯ ದ್ವಿಗುಣಗೊಳಿಸಲು ಮತ್ತೊಂದು ಹೆಜ್ಜೆ

ಬೆಂಗಳೂರು: ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ ಸೇರಿದಂತೆ  ಕೀಟನಾಶಕ, ಲಘು ಪೋಷಕಾಂಶಗಳು ಮತ್ತು ಬೆಳೆ ಪ್ರಚೋದಕಗಳ ಸಿಂಪಡಣೆ,  ಬೆಳೆವಾರು ಬಳಕೆ ಕುರಿತು ಸಂಶೋಧನೆಯನ್ನು ನಡೆಸಲು ಅನುಕೂಲವಾಗುವಂತೆ ನೂತನ ಪದ್ಧತಿಗಳನ್ನು ಅಭಿವೃದ್ಧಿ ಪಡಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ವಿಜ್ಣಾನಿಗಳ ತಂಡಗಳನ್ನು ರಚನೆ ಮಾಡಲು ಕೃಷಿ ವಿಶ್ವವಿದ್ಯಾಲಯಗಳು ಯೋಜನಾ ವರದಿ ನೀಡುವಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚಿಸಿದ್ದಾರೆ.

ವಿಕಾಸಸೌಧಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ತಾಂತ್ರಿಕತೆಗಳನ್ನು ಮೂಲಕ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಬಗ್ಗೆ ಉನ್ನತಾಧಿಕಾರದ ಸಮಿತಿಯ ಪರಿಶೀಲನಾ ಸಭೆ ನಡೆಯಿತು.

.ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಸೆಕೆಂಡರಿ ಕೃಷಿಗೆ ಒತ್ತು ನೀಡುವುದರ ಜೊತೆಗೆ ಸೆಕೆಂಡರಿ ಕೃಷಿ ಕುರಿತು ರಾಜ್ಯದ ಎಲ್ಲಾ ಕೃಷಿ ವಿಶ್ವ ವಿದ್ಯಾಲಯಗಳಲ್ಲಿರುವ ನೂತನ ತಾಂತ್ರಿಕತೆಗಳನ್ನು ಒಂದೇ ಸೂರಿನಡಿ ರೈತರಿಗೆ ಲಭ್ಯವಾಗುವಂತೆ ಇನ್ನು ಬೇಷನ್ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿ / ತರಬೇತ ನನೀಡಲು ತಿಳಿಸಲಾಯಿತು. ಹಾಗೂ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ರೈತಸ್ನೇಹಿ ಆದಾಯ ಹೆಚ್ಚಿಸುವ ಸಂಶೋಧನೆಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು. ಭಾಗವಹಿಸಿದ್ದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತರಿಂದ ಸ್ಥಳೀಯವಾಗಿ ಲಭ್ಯವಿರುವ ವಿವಿಧ ಸೆಕಂಡರಿ ಕೃಷಿ ಉದ್ಯಮಗಳ ಕುರಿತು ಮಾಹಿತಿ ಪಡೆಯಲಾಯಿತು.

ವಿಜ್ಞಾನಿಗಳ ತಂಡವನ್ನು ರಚಿಸಲು ಕೃಷಿ ವಿಶ್ವವಿದ್ಯಾಲಯಗಳಿಗೆಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸಿರುವ ಬೆಳೆಗಳ ತಳಿಗಳನ್ನು ಹಾಗೂ ಉತ್ತಮ ತಾಂತ್ರಿಕತೆಗಳ ಕುರಿತು ವ್ಯಾಪಕ ಪ್ರಚಾರ ನೀಡುವುದು. ಕೃಷಿ ಇಲಾಖೆಯು ಕೃಷಿ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಉತ್ತಮ ತಳಿಗಳನ್ನು ಸಹಾಯಧನ ಕಾರ್ಯಕ್ರಮದಡಿ ತರಲು ಕ್ರಮವಹಿಸಲು ವಿವಿಧ ಸೂಚಿಸಿದರು.

ಉನ್ನತಾಧಿಕಾರದ ಸಮಿತಿಯಲ್ಲಿ ಕೃಷಿ, ತೋಟಗಾರಿಕೆ , ರೇಷ್ಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಹಾಗೂ ವಿವಿಧ ಕೃಷಿ ತೋಟಗಾರಿಕೆ/ ಪಶುಸಂಗೋಪನಾ ವಿಶ್ವವಿದ್ಯಾಲಯಗಳ ಹಾಗೂ ಕೃಷಿ ಕುಲಪತಿಗಳು, ಆಯುಕ್ತರು, ನಿರ್ದೇಶಕರು ಪಂಡಿತ ಪ್ರಶಸ್ತಿ ವಿಜೇತರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...