ಹಾವೇರಿ: ರೈತರು, ಸೈನಿಕರು ಈ ದೇಶದ ಬೆನ್ನೆಲುಬು ಎಂದು ಕೃಷಿ ಇಲಾಖೆಯ ರಾಯಭಾರಿ ಹಾಗೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಹಿರೇಕೆರೂರು, ರಟ್ಟೆಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ರೈತರು ಭೂಮಿತಾಯಿಯನ್ನು ನಂಬಿ ಪ್ರೀತಿಯಿಂದ ದುಡಿಯುತ್ತಾರೆ, ಬೆಳೆ ಬೆಳೆಯುತ್ತಾರೆ. ತಂತ್ರಜ್ಞಾನ ಅಳವಡಿಸಿಕೊಂಡರೆ ಆದಾಯ ಹೆಚ್ಚಾಗಲಿದೆ. ಕಲಾವಿದರ ಮೇಲೆ ನಿಮ್ಮ ಅಭಿಮಾನ ಪ್ರೀತಿ ಸದಾ ಇರಲಿ ಎಂದು ಮನವಿ ಮಾಡಿದ ದರ್ಶನ್, ಬಿ.ಸಿ. ಪಾಟೀಲ್ ಅವರು ಪೊಲೀಸ್ ಅಧಿಕಾರಿಯಾಗಿ, ನಟ-ನಿರ್ಮಾಪಕರಾಗಿ, ಶಾಸಕ ಹಾಗೂ ಸಚಿವರಾಗಿ ವಿವಿಧ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ದರ್ಶನ್ ಹಾಗೂ ಬಿ.ಸಿ. ಪಾಟೀಲ್ ಅವರು ತೆರೆದ ವಾಹನದಲ್ಲಿ ವಿವಿಧ ಗ್ರಾಮಗಳಿಗೆ ಮೆರವಣಿಗೆಯಲ್ಲಿ ತೆರಳಿದ್ದು, ಅವರನ್ನು ನೋಡಲು ಅಭಿಮಾನಿಗಳುಮ ಜನರ ದಂಡೇ ನೆರೆದಿತ್ತು. ನೆಚ್ಚಿನ ನಟ ದರ್ಶನ್ ಅವರೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.