ವಿಧಾನಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮುಜುಗರಕ್ಕೆ ಒಳಗಾಗಿದ್ದಾರೆ. ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿ ನೀಡಲು ಹೋದ ಅವರು ಮುಜುಗರಕ್ಕೆ ಒಳಗಾಗಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರಾದ ವಿಪಕ್ಷನಾಯಕ ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ. ಮಾಹಿತಿ ಕೊಡಲು ಹೋಗಿ ಕೃಷಿ ಸಚಿವರು ಮುಜುಗರ ಎದುರಿಸಿದ್ದಾರೆ. ಮೊದಲು ನಾಳೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ ಬಿ.ಸಿ. ಪಾಟೀಲ್ ಅವರು, ಸ್ವಲ್ಪ ಹೊತ್ತಿನ ನಂತರ ಮಾಹಿತಿ ತಂದು ಸದನಕ್ಕೆ ನೀಡಲು ಮುಂದಾಗಿದ್ದಾರೆ.
ಬಾದಾಮಿಯಲ್ಲಿ 169 ರೈತರಿಗೆ 18.5 ಲಕ್ಷ ರೂ. ಪರಿಹಾರ ಜಮಾ ಮಾಡಲಾಗಿದೆ ಎಂದು ಸಚಿವರು ಹೇಳಿದ್ದು, ಈ ವೇಳೆ ಎಷ್ಟು ಎಕರೆ ಬೆಳೆ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಲು ಬಿ.ಸಿ. ಪಾಟೀಲ್ ತಬ್ಬಿಬ್ಬಾಗಿದ್ದಾರೆ. ನಾಳೆ ಸರಿಯಾದ ಮಾಹಿತಿ ತಂದು ಕೊಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಡ್ರಿ ಸುಮ್ಮನೆ ನಾಳೆ ಹೇಳುವಿರಂತೆ ಎಂದು ಸ್ಪೀಕರ್ ಕಾಗೇರಿ ಸಚಿವರಿಗೆ ಹೇಳಿದ್ದು, ಇಲ್ಲದೆ ಇರುವುದನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ ಎಂದು ತಿಳಿಸಿದ್ದಾರೆ.