ಮೈಸೂರು: ದಸರಾ ನಂತರ ಒಂದರಿಂದ ಐದನೇ ತರಗತಿ ಆರಂಭಿಸಲು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವಾರದೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಯಲಿದೆ ಎಂದರು.
ತಜ್ಞರ ಸಮಿತಿ ಶಾಲೆ ಬೇಡವೆಂದು ಎಲ್ಲಿಯೂ ಹೇಳಿಲ್ಲ. ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಿದೆ. ಆತುರ ಬೇಡ, ನಿಧಾನವಾಗಿ ಶಾಲೆ ಆರಂಭಿಸಿ ಎಂದು ಸಲಹೆ ನೀಡಿದೆ. ಇನ್ನೊಂದು ವಾರದಲ್ಲಿ ಸಿಎಂ ಹಾಗೂ ಟೆಕ್ನಿಕಲ್ ಟೀಮ್ ಸಭೆ ನಡೆಸಲಾಗುವುದು. ಪೋಷಕರ ಒತ್ತಾಯದ ಮೇರೆಗೆ ಶಾಲೆ ಆರಂಭಿಸಲಾಗುವುದು. ಮಕ್ಕಳ ಮನಸ್ಸಿನಲ್ಲಿಯೂ ತರಗತಿ ಆರಂಭವಾಗಬೇಕೆಂಬ ಆಶಯವಿದೆ. ಎಲ್ಲರ ಅಭಿಪ್ರಾಯ ಪಡೆದು ಶಾಲೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.