alex Certify BIG NEWS: 1 ರಿಂದ 8 ನೇ ತರಗತಿ ಆರಂಭಕ್ಕೆ ಚಿಂತನೆ, ಇನ್ನೊಂದು ವಾರದಲ್ಲಿ ಕ್ಲಾಸ್ ಶುರು ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 1 ರಿಂದ 8 ನೇ ತರಗತಿ ಆರಂಭಕ್ಕೆ ಚಿಂತನೆ, ಇನ್ನೊಂದು ವಾರದಲ್ಲಿ ಕ್ಲಾಸ್ ಶುರು ಸಾಧ್ಯತೆ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 9, 10 ನೇ ತರಗತಿ ಮತ್ತು ಪಿಯುಸಿ ಕಾಲೇಜುಗಳು ಆರಂಭವಾಗಲಿವೆ. ಮುಂದಿನ ವಾರದಿಂದ ಒಂದರಿಂದ ಎಂಟನೇ ತರಗತಿ ಕೂಡ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.

ಇಂದಿನಿಂದ ಭೌತಿಕ ತರಗತಿಗಳು ಶುರುವಾಗಲಿದ್ದು, ಈ ಅವಧಿಯಲ್ಲಿ ಮಕ್ಕಳ ಮೇಲೆ ಎದುರಾಗುವ ಪರಿಣಾಮ ಮತ್ತು ಉಂಟಾಗುವ ಸಮಸ್ಯೆಗಳು, ಪರಿಸ್ಥಿತಿ ಆಧರಿಸಿ ಒಂದರಿಂದ ಎಂಟನೇ ತರಗತಿಗಳನ್ನು ಒಂದು ವಾರದ ನಂತರ ಆರಂಭಿಸುವ ಕುರಿತಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಸಿಎಂ ಅಧ್ಯಕ್ಷತೆಯಲ್ಲಿ ತಿಂಗಳಾಂತ್ಯಕ್ಕೆ ಸಭೆ ನಡೆಸಿ ಒಂದರಿಂದ ಎಂಟನೇ ತರಗತಿ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಶಾಲೆ ಆರಂಭಿಸುವಂತೆ ಮಕ್ಕಳು, ಪೋಷಕರಿಂದ ಒತ್ತಡ ಬರುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರದಿಂದ 9 ರಿಂದ 12ನೇ ತರಗತಿಯ ಆರಂಭಿಸುತ್ತಿದ್ದು, ಪರಿಸ್ಥಿತಿ ಆಧರಿಸಿ ಒಂದರಿಂದ ಎಂಟನೇ ತರಗತಿ ಕೂಡ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...