ಬೆಂಗಳೂರು: ರಾಜ್ಯದಲ್ಲಿ ದಸರಾ ನಂತರ ಅ. 21 ರಿಂದ ಒಂದರಿಂದ ಐದನೇ ತರಗತಿ ಆರಂಭಿಸುವ ಚಿಂತನೆ ಇದೆ. ಸಿಎಂ ಮತ್ತು ತಜ್ಞರೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನಿಸಲಾಗುವುದು. ಒಂದರಿಂದ ಐದನೇ ತರಗತಿ ಆರಂಭಿಸಲು ಅನುಮತಿ ಸಿಗದಿದ್ದರೆ 3 ರಿಂದ 5 ನೇ ತರಗತಿ ಆರಂಭಿಸಲು ಮನವಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಆದರೆ, ವೈರಲ್ ಇನ್ಫೆಕ್ಷನ್, ಡೆಂಗೀ ಪ್ರಕರಣಗಳು ಹೆಚ್ಚಾಗಿವೆ. ಸದ್ಯಕ್ಕೆ ಶಾಲೆ ಬೇಡವೆಂದು ತಜ್ಞರು ಹೇಳಿದ್ದ ಕಾರಣ 1 -5 ನೇ ಕ್ಲಾಸ್ ಆರಂಭವಾಗಿಲ್ಲ. ದಸರಾ ಮುಗಿದ ನಂತರರ ಶಾಲೆ ಆರಂಭಿಸುವ ಕುರಿತಂತೆ ಸಿಎಂ, ತಜ್ಞರೊಂದಿಗೆ ಚರ್ಚಿಸಲಾಗುವುದು. ಶಿಕ್ಷಣ ಇಲಾಖೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.