ರಾಜ್ಯದಲ್ಲಿ ಕೊರೋನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಆದರೆ, ವೈರಲ್ ಇನ್ಫೆಕ್ಷನ್, ಡೆಂಗೀ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಸಿಎಂ, ತಜ್ಞರೊಂದಿಗೆ ಶಾಲೆ ಆರಂಭಿಸುವ ಬಗ್ಗೆ ಚರ್ಚೆ ಮಾಡಿ ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಒಂದರಿಂದ ಐದನೇ ತರಗತಿ ಶಾಲೆ ಆರಂಭಿಸಲು ಅನುಮತಿ ನೀಡದಿದ್ದರೆ ಕನಿಷ್ಠ 3, 4 ಮತ್ತು 5 ನೇ ತರಗತಿ ಆರಂಭಿಸಲು ಮನವಿ ಮಾಡಲಾಗುವುದು. ಶಾಲೆ-ಕಾಲೇಜು ಆರಂಭದಿಂದ ಕೊರೊನಾ ಸೋಂಕು ಇತರೆ ಖಾಯಿಲೆಗಳು ಹರಡುವುದಿಲ್ಲ ಎಂದು ಹೇಳಿದ್ದಾರೆ.
1 ರಿಂದ 5 ನೇ ತರಗತಿ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಿದ್ದು, ಅನುಮತಿ ನೀಡದಿದ್ದರೆ ಕನಿಷ್ಠ 3 ರಿಂದ 5 ನೇ ತರಗತಿ ಆರಂಭಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.