ಬೆಂಗಳೂರು : ಹವಾಮಾನ ಕ್ರಿಯಾಕೋಶ ವಾರ್ಡ್ ಮಟ್ಟದಲ್ಲಿ ವಿವಿಧ ಹವಾಮಾನ ಸಂಬಂಧಿತ ಯೋಜನೆಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದು, ಸ್ನಾತಕೋತ್ತರ ಪದವಿ ಹಾಗೂ ಯುವ ವೃತ್ತಿಪರರಿಗೆ ಅವಕಾಶ ನೀಡಲಾಗಿದೆ.
ಮೇ 2ರಿಂದ ಇಂಟರ್ನ್ಶಿಪ್ ಆರಂಭವಾಗಲಿದ್ದು, 2-6 ತಿಂಗಳ ಅವಧಿಗೆ 10 ಮಂದಿ ಇಂಟರ್ನ್ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತಿದ್ದು, ಮಾಸಿಕ ರೂ. 20,000 ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನವಾಗಿದ್ದು, ಆಸಕ್ತರು https://apps.bbmpgov.in/bcap/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ bbmpclimateactioncell@gmail.com ಸಂರ್ಕಿಸಬಹುದಾಗಿದೆ ಎಂದು ಹವಾಮಾನ ಕ್ರಿಯಾಕೋಶದ ಅಧ್ಯಕ್ಷರು ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.