ಬೆಂಗಳೂರು: ಲಂಚಕ್ಕೆ ಕೈಯೊಡ್ಡಿದ್ದ ಬಿಬಿಎಂಪಿ ಎಆರ್ ಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನಡೆದಿದೆ.
ಎಆರ್ ಒ ಚಂದ್ರಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ಖಾತೆ ಮಾಡಿಕೊಡಲು 60,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಂದ್ರಪ್ಪ 10,000 ರೂಪಾಯಿ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಇದೇ ವೇಳೆ ಚಂದ್ರಪ್ಪ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ 5 ಲಕ್ಷ ನಗದು ಹಣ, 30X40 ಅಳತೆಯ ಫ್ಲ್ಯಾಟ್, ರಾಣೆಬೆನ್ನೂರು ತಾಲೂಕಿನ 6 ಎಕರೆ ಜಮೀನು ದಾಖಲೆ ಪತ್ರ, ಕೆ.ಆರ್.ಪುರಂ ಕಟ್ಟಡದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.