ಬೆಂಗಳೂರು: ಬಿಬಿಎಂಪಿ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಬಿಬಿಎಂಪಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ನಲ್ಲಿ ಪೌರಕಾರ್ಮಿಕರಿಗೆ ಕೊಡುಗೆ ಘೋಷಿಸಲಾಗಿದೆ.
ಪೌರಕಾರ್ಮಿಕರಿಗೆ ತಲಾ 5 ಸಾವಿರ ರೂಪಾಯಿ ಘೋಷಿಸಲಾಗಿದೆ. ಇದಕ್ಕಾಗಿ 7.5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸ್ವಚ್ಛತೆ ಪರಿಕರಗಳನ್ನು ಖರೀದಿಸಲು ಮಾಸಿಕ 200 ರೂಪಾಯಿ ನೀಡಲಾಗುವುದು.
ಪಾಲಿಕೆಯ ಡಿ ಗ್ರೂಪ್ ನೌಕರರ ಮಕ್ಕಳು ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ 1 ಲಕ್ಷ ರೂಪಾಯಿವರೆಗೆ ಬೋಧನಾ ಶುಲ್ಕ ಮತ್ತು ಪರೀಕ್ಷಾ ಶುಲ್ಕ ಮರುಪಾವತಿಗೆ 9.5 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ.