ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರನ್ನು ಬಿಬಿಎಂಪಿ ಪ್ರಕಟಿಸಿದೆ. 8 ವಲಯಗಳಲ್ಲಿ ತೆರಿಗೆ ಬಾಕಿ ಉಳಿಸಿಕೊಂದವರ ಹೆಸರನ್ನು ಪ್ರಕಟಿಸಿದೆ.
ಸ್ಟಾರ್ ಹೋಟೆಲ್ ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಟೆಕ್ ಪಾರ್ಕ್ ಗಳು, ಐಟಿ ಕಂಪನಿಗಳು ಮತ್ತು ಶಾಪಿಂಗ್ ಮಾಲ್ ಗಳು ಬಿಬಿಎಂಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿದೆ.
400 ತೆರಿಗೆ ಸುಸ್ತಿದಾರರಿಂದ ಒಟ್ಟು 130.79 ಕೋಟಿ ರೂ. ಹಣ ಬಿಬಿಎಂಪಿಗೆ ತೆರಿಗೆ ರೂಪದಲ್ಲಿ ಬರಬೇಕಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬೆಂಗಳೂರು ಪಶ್ಚಿಮ ವಲಯ, ಬೊಮ್ಮನಹಳ್ಳಿ, ದಾಸರಹಳ್ಳಿ, ದಕ್ಷಿಣ ವಲಯ, ಮಹದೇವಪುರ, ಪೂರ್ವ ವಲಯ, ರಾಜರಾಜೇಶ್ವರಿ ನಗರ, ಯಲಹಂಕ ಈ ಎಂಟು ವಲಯಗಳ ಅಭಿಷೇಕ್ ಡೆವಲಪರ್ಸ್, ಶ್ರೀನಿವಾಸ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್, ಟಿ.ಎನ್.ವೆಂಕಟೇಶ್ ಮತ್ತು ವಿ.ಪುಷ್ಪಕುಮಾರಿ, ಬ್ರಿಗೇಡ್ ಫೌಂಡೇಷನ್, ಸೌಜನ್ಯ ಪಟೇಲ್ ಟ್ರಸ್ಟ್, ಜ್ಞಾನಸ್ವೀಕಾರ ಪ್ರತಿಷ್ಠಾನ ವ್ಯವಸ್ಥಾಪಕ ಹೆಚ್.ಡಿ ಬಲಕೃಷ್ಣಗೌಡ, ಗಂಗಾಧರ್ ಟಿ ಹಾಗೂ ಮಾನ್ಯತಾ ಪ್ರಮೋಟರ್ಸ್ ಪ್ರೈ.ಲಿ ಹೆಸರುಗಳನ್ನು ಪ್ರಕಟಿಸಿದೆ.