ಬೆಂಗಳೂರು: ಅಂತಿಮ ಇ-ಖಾತಾ ಪಡೆಯಲು ಅಗತ್ಯ ದಾಖಲಾತಿ, ಆಸ್ತಿಯ ಜಿಪಿಎಸ್ ಆಧಾರಿತ ಫೋಟೋ ನೀಡುವುದು ಕಡ್ಡಾಯವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ವತಿಯಿಂದ ಇ-ಖಾತಾ ವ್ಯವಸ್ಥೆಯನ್ನು ನಾಗರಿಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ್ದು, ಪಾಲಿಕೆಯ ಅಧಿಕಾರಿಗಳ ನಿಯಂತ್ರಣದಲ್ಲಿ ಇಲ್ಲ. ಬಿಬಿಎಂಪಿ ಅಧಿಕಾರಿಗಳು ಅಂತಿಮ ಇ-ಖಾತಾ ರಚಿಸಬೇಕಾದರೆ ಆಸ್ತಿ ಮಾಲೀಕರ ಮಾಹಿತಿ ವಿವರದ ದಾಖಲಾತಿಗಳು ಹಾಗೂ ಆಸ್ತಿಯ ಫೋಟೋ ನೀಡುವುದನ್ನು ಕಡ್ಡಾಯ ಮಾಡಲಾಗಿದೆ ಅವುಗಳನ್ನು ನೀಡದಿದ್ದರೆ ಅಂತಿಮ ಏಕಾಂತ ರಚನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.
ಈಗಾಗಲೇ ಸುಮಾರು 22 ಲಕ್ಷ ಆಸ್ತಿಗಳ ಕರಡು ಇ-ಖಾತಾಗಳನ್ನು ಬಿಬಿಎಂಪಿಯ BBMPeAasthi.karnataka.gov.in, ವೆಬ್ಸೈಟ್ ನಲ್ಲಿ ವಾರ್ಡ್ ವಾರು ಪ್ರಕಟಿಸಲಾಗಿದೆ. ಆಸ್ತಿ ತೆರಿಗೆ ರಶೀದಿಯಿಂದ ತಮ್ಮ ವಾರ್ಡ್ ತಿಳಿದುಕೊಳ್ಳಬಹುದಾಗಿದೆ. ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ ವಾರ್ಡ್ ವಾರು ಪಟ್ಟಿಯಲ್ಲಿ ಮಾಲೀಕರ ಹೆಸರು ಬಳಸಿಕೊಂಡು ತಮ್ಮ ಆಸ್ತಿಯನ್ನು ಹುಡುಕಿಕೊಳ್ಳಬಹುದು. ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು. ತಮ್ಮ ದಾಖಲೆಗಳು ಹೊಂದಾಣಿಕೆಯಾದಲ್ಲಿ ಅಂತಿಮ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.