alex Certify BIG NEWS : ಗ್ರಾಮ ಪಂಚಾಯಿತಿಯ ಇ – ಖಾತಾ ಹೊಂದಿದ್ದವರಿಗೆ BBMP ಇ – ಖಾತಾ ಸೃಷ್ಟಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಗ್ರಾಮ ಪಂಚಾಯಿತಿಯ ಇ – ಖಾತಾ ಹೊಂದಿದ್ದವರಿಗೆ BBMP ಇ – ಖಾತಾ ಸೃಷ್ಟಿ.!

ಬೆಂಗಳೂರು : ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿ ಇ – ಸ್ವತ್ತು ತಂತ್ರಾಂಶದಿಂದ ಹಳೆಯ ಗ್ರಾಮ ಪಂಚಾಯಿತಿಯ ಇ – ಖಾತಾ ಹೊಂದಿದ್ದ ಆಸ್ತಿಗಳಿಗೆ ಸ್ವಯಂಚಾಲಿತವಾಗಿ ಬಿಬಿಎಂಪಿಯಿಂದ ಇ – ಖಾತಾ ಸೃಷ್ಟಿಯಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಯನ್ನು ಬಿಬಿಎಂಪಿಯಲ್ಲಿ ವಿಲೀನಗೊಳಿಸುವ ಮೊದಲು ಪಂಚಾಯಿತಿಯಿಂದ ಇ-ಖಾತಾ ಹೊಂದಿದ್ದ ಮಲ್ಲಸಂದ್ರ ಮತ್ತು ಕಾವಲ್ ಗ್ರಾಮಗಳಲ್ಲಿನ ಸುಮಾರು 2,500 ಸ್ವತ್ತುಗಳಿಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಗಳು ಮತ್ತು ಬಿಬಿಎಂಪಿ ಇ-ಖಾತಾಗಳನ್ನು ರಚಿಸಲಾಗಿದೆ. ಈ ಆಸ್ತಿಗಳ ಮಾಲೀಕರು, ಪಂಚಾಯಿತಿಯಿಂದ ನೀಡಿರುವ ಇ-ಸ್ವತ್ತು (ಇ-ಖಾತಾ) ಸಂಖ್ಯೆ ಹಾಗೂ ಸ್ವಯಂಘೋಷಿತ ಆಸ್ತಿ ತೆರಿಗೆಯ ಅರ್ಜಿ ಸಂಖ್ಯೆ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಬಹುದು ಎಂದು ಮಾಹಿತಿ ನೀಡಿದರು.

ಆಸ್ತಿ ತೆರಿಗೆ ಪಾವತಿಸಿದ ನಂತರ ಬಿಬಿಎಂಪಿಯಿಂದ ಇ-ಖಾತಾ ಪಡೆಯಬಹುದಾಗಿರುತ್ತದೆ. ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಅಡಿಯಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಆಗಲಿದೆ. ಬಿಬಿಎಂಪಿ ಪಟ್ಟಿಯಲ್ಲಿ ಸ್ವತ್ತುಗಳು ಇಲ್ಲದಿದ್ದರೆ ಅವರು ಇ-ಖಾತಾಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಇ-ಖಾತಾ ನೀಡಲಾಗುವುದು ಎಂದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...