ಬೆಂಗಳೂರು : ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬಜೆಟ್ ( 2024-25 ಮಂಡನೆ ಮಾಡಿದ್ದು, ಒಟ್ಟು 12,36,950 ಕೋಟಿ ರೂಪಾಯಿ ಆಯವ್ಯಯ ಮಂಡಿಸಿದ್ದಾರೆ. ಬಿಬಿಎಂಪಿ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರು ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಮೀಸಲಿಡಲಾಗಿದೆ. 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಬಿಬಿಎಂಪಿ ಬಜೆಟ್ ನಲ್ಲಿ ‘ಬ್ರಾಂಡ್ ಬೆಂಗಳೂರು’ ಯೋಜನೆಗೆ ಪ್ರಾಮುಖ್ಯತೆ ನೀಡಿದೆ. ಹೊಸ ಮಾರ್ಗದರ್ಶಿ ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.
ಬಿಬಿಎಂಪಿ ಬಜೆಟ್ ನ ಹೈಲೆಟ್ಸ್
* ವಿಶ್ವೇಶ್ವರಯ್ಯ ರೈಲ್ವೆಗೆ ಸಂಪರ್ಕ ಕಲ್ಪಿಸುವ ರೋಟರಿ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿ 380 ಕೋಟಿ ಅನುದಾನ ಒದಗಿಸಲಾಗಿದೆ.
*ವೈಟ್ ಟಾಪಿಂಗ್ ಗೆ ಸರ್ಕಾರ ಘೋಷಿಸಿದ 900 ಕೋಟಿಯಲ್ಲಿ ಆರಂಭಿಕವಾಗಿ 300 ಕೋಟಿ ಅನುದಾನ ನೀಡಲಾಗಿದೆ.
*ಬನಶಂಕರಿಯಲ್ಲಿ TOD ಸ್ಕೈ ವಾಕ್ ಗೆ 50 ಕೋಟಿ ನೀಡಲಾಗಿದೆ.
*ಕೆಳಸೇತುವೆ, ಮೇಲ್ಸೇತುವೆ ನಿರ್ವಹಣೆಗೆ 25 ಕೋಟಿ ಮೀಸಲು ಇರಿಸಲಾಗಿದೆ.
ಬಜೆಟ್ನಲ್ಲಿ ಸ್ವಚ್ಛ ಬೆಂಗಳೂರಿಗೆ ಒತ್ತು ನೀಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ಸಂಗ್ರಹ, ಸಾಗಣೆ ಮತ್ತು ಪ್ರಕ್ರಿಯೆಗೆ ಒತ್ತು ನೀಡಲು ಬಿಬಿಎಂಪಿ ನಿರ್ಧರಿಸಿದೆ.
*ಮುಂದಿನ 25-30 ವರ್ಷಗಳವರೆಗೆ ತ್ಯಾಜ್ಯವನ್ನು ಸಂಸ್ಕರಿಸಲು ಪ್ರತಿ 50-100 ಎಕರೆಗಳ 4 ದಿಕ್ಕಿನಲ್ಲಿ ಜಮೀನು ಖರೀದಿಗೆ 100 ಕೋಟಿ ನಿಯೋಜನೆ
ಹೊಸ ಜಾಹೀರಾತು ನೀತಿ
ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಳವಾಗಿದ್ದು, ಆನ್ಲೈನ್ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ. ಪಾಲಿಕೆಯ ಆಸ್ತಿ ನಿರ್ವಹಣೆ, ರಕ್ಷಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ಸುಗಮ ಸಂಚಾರ ಶೀರ್ಷಿಕೆಯಡಿ ಬೆಂಗಳೂರು ನಗರ ಸುಗಮ ಸಂಚಾರ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ಮೊದಲು 2 ಸ್ಥಳದಲ್ಲಿ ಸುರಂಗಮಾರ್ಗ ನಿರ್ಮಾಣ ಮಾಡಲು 200 ಕೋಟಿ ರೂ. ಮೀಸಲು ಇಡಲಾಗುವುದು.
ಬನಶಂಕರಿ ವೃತ್ತದಲ್ಲಿ ಸ್ಕೈವಾಕ್ ನಿರ್ಮಾಣ, ಬಿಎಂಟಿಸಿ, ಮೆಟ್ರೋಗೆ ಹೊಂದಿಕೊಂಡಂತೆ ಸ್ಕೈವಾಕ್ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ರಾಜಕಾಲುವೆ ಬಫರ್ ಝೋನ್ ನಲ್ಲಿ 300 ಕಿಮೀ ಉದ್ದದ ಜನ ಸ್ನೇಹಿ ಪಥ ನಿರ್ಮಿಸಲು 600 ಕೋಟಿ ರೂ. ಮೀಸಲಿಡಲಾಗುವುದು.
ಮೂಲಸೌಕರ್ಯ ಯೋಜನೆಗೆ ಬಿಬಿಎಂಪಿ ಕೊಡುಗೆ..?
*ಪ್ರತಿ ವಾಡ್೯ ಅಭಿವೃದ್ಧಿ ಕಾಮಗಾರಿಗಳಿಗೆ ತಲಾ 1.25 ಕೋಟಿ ರೂ.
* ಪಾದಚಾರಿ ಮಾರ್ಗ ನಿರ್ವಹಣೆ ತಲಾ 25 ಲಕ್ಷ ರೂ.
*ರಸ್ತೆ ಗುಂಡಿ ಮುಚ್ಚಲು 15 ಲಕ್ಷ ರೂ.
* ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ 450 ಕೋಟಿ ರೂ.
* ಚರಂಡಿ ಹೂಳೆತ್ತುವಿಕೆ, ನಿರ್ವಹಣೆಗೆ ತಲಾ 30 ಲಕ್ಷ ರೂ.
*ಬೆಂಗಳೂರು ನಗರದಲ್ಲಿ 145 ಕಿಮೀ ರಸ್ತೆಗೆ ವೈಟ್ ಟಾಪಿಂಗ್ಗೆ 800 ಕೋಟಿ ರೂ. ಮೀಸಲು
*ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂ. ಘೋಷಿಸಲಾಗಿದೆ
*ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂಪಾಯಿ ಘೋಷಣೆ . ಬೆಂಗಳೂರಿನಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಸ್ಥಾಪನೆ, ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು 70 ಕೋಟಿ ರೂ. ಮೀಸಲು ಇಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
*ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ‘ಬ್ರಾಂಡ್ ಬೆಂಗಳೂರು’ ಯೋಜನೆಗೆ ಬಿಬಿಎಂಪಿ ಪ್ರಾಮುಖ್ಯತೆ ನೀಡಿದೆ.ಬ್ರಾಂಡ್ ಬೆಂಗಳೂರು ಪರಿಕಲ್ಪನೆಯನ್ನು ವಿಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ಈ ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ಬ್ರಾಂಡ್ ಬೆಂಗಳೂರು ಯೋಜನೆಗೆ ಒಟ್ಟು 1,580 ಕೋಟಿ ರೂ. ಘೋಷಿಸಲಾಗಿದೆ.
ಬ್ರಾಂಡ್ ಬೆಂಗಳೂರಿನ 8 ವಿಭಾಗಗಳು
1. ಸುಗಮ ಸಂಚಾರ, ಬೆಂಗಳೂರು
2 .ಸ್ವಚ್ಛ ಬೆಂಗಳೂರು
3. ಹಸಿರು ಬೆಂಗಳೂರು
4. ಆರೋಗ್ಯಕರ ಬೆಂಗಳೂರು
5. ಶಿಕ್ಷಣ ಬೆಂಗಳೂರು
6. ಟೆಕ್ ಬೆಂಗಳೂರು
7 . Vibrant Bengaluru
8. ಜಲ ಭದ್ರತೆ ಬೆಂಗಳೂರು
ಬಳ್ಳಾರಿ ರಸ್ತೆಯಿಂದ ಬೇಗೂರು ಮೂಲಕ ಸಾದಹಳ್ಳಿ ಗೇಟ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ಹಾಗೂ ಸಾತನೂರು ಮೀಸಗಾನಹಳ್ಳಿಯಿಂದ ಮತ್ತೊಂದು ರಸ್ತೆ ನಿರ್ಮಿಸಲು ಟಿಡಿಆರ್ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.