alex Certify ಬೆಂಗಳೂರು : ಮಾರ್ಚ್ ಮೊದಲ ವಾರದಲ್ಲಿ ‘BBMP’ ಬಜೆಟ್ ಮಂಡನೆ ಸಾಧ್ಯತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು : ಮಾರ್ಚ್ ಮೊದಲ ವಾರದಲ್ಲಿ ‘BBMP’ ಬಜೆಟ್ ಮಂಡನೆ ಸಾಧ್ಯತೆ..!

ಬೆಂಗಳೂರು : ಲೋಕಸಭಾ ಚುನಾವಣೆಗೂ ಮುನ್ನವೇ ಬಿಬಿಎಂಪಿ ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬಜೆಟ್ ಮಂಡಿಸಲು ಸಿದ್ದತೆ ನಡೆಸಿದೆ.

ಮಾರ್ಚ್ ಮೊದಲ ವಾರದಲ್ಲೇ ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯ ಮಂಡನೆಗೆ ಅಧಿಕಾರಿಗಳು ಸಿದ್ಧತೆ ಆರಂಭಿಸಿದ್ದಾರೆ. ರಾಜ್ಯ ಸರ್ಕಾರದ ಆಯವ್ಯಯ ಮಂಡನೆ ಆಗುತ್ತಿದ್ದಂತೆ ಅದರ ಬೆನ್ನಲ್ಲೇ ಬಿಬಿಎಂಪಿ ಬಜೆಟ್ ಮಂಡನೆಗೆ ನಿರ್ಧರಿಸಿದ್ದು, ಈಗಿನಿಂದಲೇ ಬಿಬಿಎಂಪಿ ಬಜೆಟ್ ತಯಾರಿ ಆರಂಭಿಸಲಾಗಿದೆ.

ಈ ಹಿನ್ನೆಲೆ ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.ಈ ಸಭೆಯಲ್ಲಿಸರ್ಕಾರದ ಅನು ದಾನದಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮ, ಕಾಮಗಾರಿ ಹಾಗೂ ಯೋಜನೆಗಳ ಪಟ್ಟಿ ಹಾಗೂ ಅಂದಾಜು ವೆಚ್ಚದ ವಿವರ ನೀಡುವಂತೆ ನಿರ್ದೇಶನ ನೀಡಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...