
ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ.
ಬೆಳಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಸಾಧ್ಯವಿಲ್ಲ. ಚಳಿ ಶುರುವಾಯಿತು ಎಂದರೆ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಕಷ್ಟಸಾಧ್ಯವಾದ್ದರಿಂದ ಬಿಸಿನೀರು ಸ್ನಾನ ಮಾಡಲು ಇಚ್ಚಿಸುತ್ತಾರೆ.
ಆದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಚಳಿಗಾಲದಲ್ಲಿ ತುರಿಕೆ ಸಮಸ್ಯೆ ವಿಪರೀತವಾಗಿ ಕಾಡುತ್ತದೆ. ಕೆಲವರಿಗೆ ಇದರಿಂದ ಗಾಯಗಳು ಆಗುವುದುಂಟು. ಹೀಗಾಗಿ ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆಯ ನಾಲ್ಕು ಹನಿಯನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದರಿಂದ ತೇವಾಂಶ ಹಾಗೆ ಇರುವುದಲ್ಲದೆ ಒಣ ಚರ್ಮದ ಸಮಸ್ಯೆಯೂ ಇರುವುದಿಲ್ಲ.
ಜೊತೆಗೆ ನೀರು ಜಾಸ್ತಿ ಬಿಸಿ ಇದ್ದರೆ ಮೈಮೇಲೆ ಕೆಂಪು ಕಲೆಗಳ ಆಗುವ ಸಾಧ್ಯತೆಯೂ ಇದೆ. ಹಾಗಾಗಿ ಆದಷ್ಟು ಬೆಚ್ಚಗಿನ ನೀರಿನಲ್ಲಿ ಪ್ರತಿ ದಿನ ಸ್ನಾನ ಮಾಡಿದರೆ ಒಳ್ಳೆಯದು.