ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. ಇದೆಲ್ಲದರ ಜೊತೆಗೆ ಪ್ರತಿದಿನ ಸ್ನಾನ ಮಾಡುವುದರಿಂದ ಆಧ್ಯಾತ್ಮಿಕ ಲಾಭ ಕೂಡ ಇದೆ.
ಸ್ನಾನ ಮಾಡದೆ ಮಾಡಿದ ಪುಣ್ಯ ಕೆಲಸಗಳಿಗೆ ಫಲ ಸಿಗುವುದಿಲ್ಲ. ಶೇವ್ ಮಾಡಿದ ನಂತ್ರ, ಸ್ಮಶಾನಕ್ಕೆ ಹೋಗಿ ಬಂದ ಮೇಲೆ, ಎಣ್ಣೆ ಹಚ್ಚಿದ ಬಳಿಕ ಹಾಗೂ ಸ್ತ್ರೀ ಸಂಗ ಮಾಡಿದ ವ್ಯಕ್ತಿ ಎಲ್ಲಿಯವರೆಗೆ ಸ್ನಾನ ಮಾಡುವುದಿಲ್ಲವೋ ಅಲ್ಲಿಯವರೆಗೆ ಅಶುದ್ಧವಾಗಿರ್ತಾನೆ.
ನದಿಯಲ್ಲಿ ಸ್ನಾನ ಮಾಡುವ ವೇಳೆ ನದಿ ಯಾವ ದಿಕ್ಕಿನಿಂದ ಹರಿದು ಬರ್ತಾ ಇದೆಯೋ ಆ ದಿಕ್ಕಿಗೆ ಮುಖ ಮಾಡಿ ಸ್ನಾನ ಮಾಡಬೇಕು. ಬಳಲಿಕೆಯನ್ನು ತೆಗೆದು ಹಾಕದ ಹಾಗೂ ಮುಖವನ್ನು ತೊಳೆಯದ ಸ್ನಾನ ಸ್ನಾನವಲ್ಲ. ಸ್ನಾನ ಮಾಡದೆ ಎಂದೂ ಶ್ರೀಗಂಧವನ್ನು ಹಚ್ಚಿಕೊಳ್ಳಬಾರದು.
ಭಾನುವಾರ, ಸಂಕ್ರಾಂತಿ, ಗ್ರಹಣದ ದಿನ, ವೃತ- ಉಪವಾಸದ ದಿನ, ಅಮವಾಸ್ಯೆ ಹಾಗೂ ಷಷ್ಠಿಯ ದಿನ ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದು. ಬೆತ್ತಲಾಗಿ ಎಂದೂ ಸ್ನಾನ ಮಾಡಬಾರದು.