ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಪ್ರತಿದಿನ ಸ್ನಾನ ಮಾಡುವ ಅವಶ್ಯಕತೆ ಇದೆ. ಹಾಗೆ ಈ ಸ್ನಾನಕ್ಕೆ ನಮ್ಮ ಅದೃಷ್ಟವನ್ನು ಬದಲಾಯಿರುವ ಶಕ್ತಿ ಇದೆ. ಸ್ನಾನ ಮಾಡುವಾಗ ಕೆಲವೊಂದು ಪದ್ಧತಿಗಳನ್ನು ಅನುಸರಿಸಿದ್ರೆ ಲಕ್ಷ್ಮಿ ಅನುಗ್ರಹ ನಮ್ಮ ಮೇಲೆ ಬೀಳುವುದರಲ್ಲಿ ಎರಡು ಮಾತಿಲ್ಲ.
ಸೂರ್ಯ ಉದಯಕ್ಕೂ ಮುನ್ನ ನಕ್ಷತ್ರಗಳ ಬೆಳಕಿನಲ್ಲಿ ಸ್ನಾನ ಮಾಡುವುದರಿಂದ ದುಷ್ಟ ಶಕ್ತಿಗಳ ಬಲ ಕಡಿಮೆಯಾಗುತ್ತದೆ.
ಸ್ನಾನ ಮಾಡುವ ವೇಳೆ ಗುರು ಮಂತ್ರ, ಸ್ತೋತ್ರ, ಭಜನೆ ಸೇರಿದಂತೆ ಭಗವಂತನ ನಾಮಸ್ಮರಣೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ.
ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಆಹಾರವಾದ ನಂತ್ರ ಸ್ನಾನ ಮಾಡುವ ರೂಢಿ ಬೆಳೆದು ಬಂದಿದೆ. ಆದ್ರೆ ಆಹಾರಕ್ಕಿಂತ ಮೊದಲು ಸ್ನಾನ ಮಾಡುವುದು ಒಳ್ಳೆಯದು. ಹಾಗೆ ಮೊದಲು ತಲೆಗೆ ನೀರನ್ನು ಹಾಕಿಕೊಂಡು ನಂತ್ರ ದೇಹದ ಉಳಿದ ಭಾಗಗಳಿಗೆ ನೀರನ್ನು ಹಾಕಬೇಕು. ಆಧ್ಯಾತ್ಮಿಕವಾಗೊಂದೇ ಅಲ್ಲ ವೈಜ್ಞಾನಿಕ ಕಾರಣ ಕೂಡ ಇದಕ್ಕಿದೆ. ತಲೆ ಹಾಗೂ ದೇಹದ ಮೇಲಿನ ಭಾಗಗಳ ಉಷ್ಣತೆ ಪಾದದ ಮೂಲಕ ಹೋಗುತ್ತದೆ.
ಬಹಳ ಹೊತ್ತು ಹಾಗೂ ಸ್ವಚ್ಛವಾಗಿ ಸ್ನಾನ ಮಾಡುವುದರಿಂದ ದೇಹದ ದಣಿವು ಕಡಿಮೆಯಾಗುತ್ತದೆ. ಜೊತೆಗೆ ಮನಸ್ಸು ಉಲ್ಲಾಸಗೊಳ್ಳತ್ತದೆ.
ಜ್ಯೋತಿಷ್ಯದ ಪ್ರಕಾರ ಪ್ರತಿದಿನ ನೀರಿಗೆ ಸ್ವಲ್ಪ ಕಪ್ಪು ಎಳ್ಳು ಹಾಕಿ ಸ್ನಾನ ಮಾಡುವುದರಿಂದ ಅದೃಷ್ಟ ಒಲಿದು ಬರುತ್ತದೆ. ಬಡತನ ದೂರವಾಗಿ ಆರೋಗ್ಯ ವೃದ್ಧಿಯಾಗುತ್ತದೆ.