ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮದ ಪ್ರತಿಯೊಬ್ಬ ನಿರ್ಗತಿಕರಿಗೆ ಶೌಚಾಲಯ ಒದಗಿಸಲಾಗ್ತಿದೆ. ಸರ್ಕಾರ ಪ್ರತಿ ಗ್ರಾಮದಲ್ಲಿ ಸಮುದಾಯ ಶೌಚಾಲಯಗಳನ್ನೂ ನಿರ್ಮಿಸುತ್ತಿದೆ. ಬಸ್ತಿ ಜಿಲ್ಲೆಯ ಸಲತೌವಾ ಬ್ಲಾಕ್‌ನ ಭಿಯುರಾ ಗ್ರಾಮದಲ್ಲಿ ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಶೌಚಾಲಯದ ಒಳಗೆ ಎರಡು ಆಸನಗಳನ್ನು ಮಾಡಲಾಗಿದೆ.
ಈ ವಿಷಯ ಬೆಳಕಿಗೆ ಬಂದ ನಂತರ ಮಕ್ಕಳೊಳಗಿನ ಭಯವನ್ನು ಹೋಗಲಾಡಿಸಲು ಶೌಚಾಲಯದಲ್ಲಿ ಎರಡು ಆಸನ ಅಳವಡಿಸಲಾಗಿದೆ ಎಂದು ಬಸ್ತಿ ಜಿಲ್ಲೆಯ ಬಿಡಿಒ ಅಜಿತ್ ಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಫೋಟೋ, ವಿಡಿಯೋ ವೈರಲ್ ಆಗಿದೆ.
ಬಸ್ತಿ ಜಿಲ್ಲಾ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಆಲೋಚನೆ ನೋಡಿ ಜನರು ದಂಗಾಗಿದ್ದಾರೆ. ಶೌಚಾಲಯ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿಯನ್ನು ಸರ್ಕಾರ ನೀಡ್ತಿದೆ. ಆದ್ರೆ ಅಧಿಕಾರಿಗಳು ಇಂಥ ಯಡವಟ್ಟು ಮಾಡಿ ಹಣ ಹಾಳು ಮಾಡ್ತಿದ್ದಾರೆ.
ಫೋಟೋ ಹೊರ ಬರ್ತಿದ್ದಂತೆ ಆಯುಕ್ತರು ತನಿಖೆಗೆ ಆದೇಶ ನೀಡಿದ್ದಾರೆ. ನಿಜಕ್ಕೂ ಇದು ಹಾಸ್ಯಾಸ್ಪದ. ಇದ್ರಲ್ಲಿ ತೀವ್ರ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಇದನ್ನು ತನಿಖೆ ಮಾಡಲಾಗುವುದು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.