ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಜೆರೆಮಿ ವೇರ್ ಅವರು ಬಾಸ್ಕೆಟ್ಬಾಲ್ನಲ್ಲಿ ವಿಶ್ವ ದಾಖಲೆ ಮಾಡಿದರು. ಇದರ ವಿಡಿಯೋ ವೈರಲ್ ಆಗಿದೆ.
ಅತ್ಯಂತ ದೂರದಿಂದ ಹಿಮ್ಮುಖವಾಗಿ ಬಾಸ್ಕೆಟ್‌ಬಾಲ್ ನೆಟ್ಗೆ ಸರಿಯಾಗಿ ಬಾಲ್ ಹೊಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಹಿಂದಿದ್ದ ದಾಖಲೆಯನ್ನು ಮುರಿದಿದ್ದಾರೆ.
ಜೆರೆಮಿ ಈ ದಾಖಲೆಯನ್ನು ಸ್ಥಾಪಿಸಲು 26.06 ಮೀಟರ್ ಅಥವಾ 85 ಅಡಿ 5 ಇಂಚುಗಳ ದೂರ ಕ್ರಮಿಸಿದ್ದಾರೆ.
ಪ್ರೌಢಶಾಲೆಯಲ್ಲಿಯೇ ಕಂಡ ಕನಸು ನನಸಾಯಿತು ಎಂದಿದ್ದಾರೆ. ಜೆರೆಮಿ 2010 ರಿಂದ ಬಾಸ್ಕೆಟ್‌ಬಾಲ್ ಅಭ್ಯಾಸ ಮಾಡುತ್ತಿದ್ದರು. ಆರಂಭದಲ್ಲಿ ಕೇವಲ ಮೋಜಿಗಾಗಿ ಮಾಡುತ್ತಿದ್ದೆ. ನಂತರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡುವ ಆಸೆಯಾಯಿತು. 12 ವರ್ಷಗಳ ನಂತರ, ಬಾಸ್ಕೆಟ್‌ಬಾಲ್ ಹಿಮ್ಮುಖವಾಗಿ ಹೊಡೆಯುವುದನ್ನು ಕಲಿತೆ. ಹಿಮ್ಮುಖವಾಗಿ ಅತಿ ದೂರದಿಂದ ಹೊಡೆತ ಹೊಡೆದು ದಾಖಲೆ ಮಾಡಿದ್ದೇನೆ ಎಂದು ಹೇಳಿದ್ದಾರೆ ಜೆರೆಮಿ.
ಜೆರೆಮಿ ವೇರ್ ವಿಶ್ವ ದಾಖಲೆಯನ್ನು ಮುರಿಯುವ ದೃಶ್ಯಗಳಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಕಮೆಂಟ್ ವಿಭಾಗಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
https://youtu.be/crLrt8jcwlo