ಭಾರತೀಯ ಜನತಾ ಪಕ್ಷದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಅನಾರೋಗ್ಯದ ಕಾರಣ ನೀಡಿ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ವೀಲ್ ಚೇರ್ ಮೇಲೆಯೆ ಅವಲಂಬಿತರಾಗಿರೊ ಅವರ ಇತ್ತೀಚಿನ ಚಟುವಟಿಕೆಗಳು ಆಕೆಗೆ ನಿಜವಾಗಲು ಅನಾರೋಗ್ಯ ಸಮಸ್ಯೆ ಇದೆಯ ಎಂಬ ಗಂಭೀರ ಪ್ರಶ್ನೆ ಹುಟ್ಟುಹಾಕಿವೆ.
ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ, ಇತ್ತೀಚೆಗೆ ವೈರಲ್ ಆಗಿದೆ. ವಿಡಿಯೋದಲ್ಲಿ ಜನರ ಹರ್ಷೋದ್ಘಾರದ ನಡುವೆ ಸರಾಗವಾಗಿ ಪ್ರಜ್ಞಾ ಬ್ಯಾಟ್ ಬೀಸುವುದನ್ನ ನೋಡಬಹುದು. ಇದು ಮೊದಲಲ್ಲ, ಈ ಹಿಂದೆಯು ನೃತ್ಯ ಮತ್ತು ಬಾಸ್ಕೆಟ್‌ಬಾಲ್ ಆಡಿದ್ದಕ್ಕಾಗಿ ಪ್ರತಿಪಕ್ಷಗಳಿಂದ ಪದೇ ಪದೇ ಟೀಕೆಗೆ ಗುರಿಯಾಗಿದ್ದರು.
ಅನಾರೋಗ್ಯದ ಕಾರಣ ನೀಡಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದ್ಕೊಂಡಿರೊ ಪ್ರಜ್ಞಾ ಈಗ ಇಷ್ಟು ಸರಾಗವಾಗಿ ಕ್ರಿಕೆಟ್ ಆಡಿರುವುದು ಹೇಗೆ. ನವರಾತ್ರಿ ಸಂದರ್ಭದಲ್ಲು ಗರ್ಬಾ ನೃತ್ಯ ಮಾಡಿದ್ರು. ಆನಂತರ ಬಾಸ್ಕೆಟ್ ಬಾಲ್ ಆಡಿದ್ದರು ಈಗ ಕ್ರಿಕೆಟ್ ಎಂದು ಪ್ರತಿಪಕ್ಷಗಳ ಜೊತೆಗೆ, ನೆಟ್ಟಿಗರು ಸಂಸದೆಯನ್ನ ಟೀಕಿಸಿದ್ದಾರೆ.
2008ರ ಮಾಲೇಗಾಂವ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೋಪಾಲ್ ನ ಸಂಸದೆ ಪ್ರಜ್ಞಾ ಠಾಕುರ್ ಸಿಂಗ್ ಅವ್ರನ್ನ ಈ ಹಿಂದೆ ಮುಂಬೈನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿತ್ತು.