ಒಣಕೆಮ್ಮು ಇದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಈ ಕೆಮ್ಮು ಶುರುವಾದ್ರೆ ರಾತ್ರಿ ಇಡೀ ನಿದ್ದೆ ಬರಲ್ಲ. ಕೆಮ್ಮಿ, ಕೆಮ್ಮಿ ಹೊಟ್ಟೆ ನೋವು, ಎದೆ ಉರಿ, ಗಂಟಲು ಉರಿ ಶುರುವಾಗುತ್ತೆ. ಕಫವಿರದ ಈ ಕೆಮ್ಮು, ವಾತಾವರಣ ಬದಲಾವಣೆಯಿಂದ ಮತ್ತು ಮಾಲಿನ್ಯದಿಂದ ಬರುತ್ತದೆ.
ಒಣ ಕೆಮ್ಮು ಶುರುವಾಯ್ತು ಅಂತಾ ವೈದ್ಯರ ಬಳಿ ಹೋಗಿ ಇದಕ್ಕೆ ಒಂದಿಷ್ಟು ಮಾತ್ರೆ, ಔಷಧಿ, ಚುಚ್ಚುಮದ್ದು ತೆಗೆದುಕೊಳ್ಳುವುದು ಸರಿಯಲ್ಲ. ಇಂತಹ ಕಾಯಿಲೆಗಳಿಗೆ ಆದಷ್ಟು ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಬೇಕು.
ಈ ಒಣ ಕೆಮ್ಮಿಗೆ ಉತ್ತಮ ಔಷಧಿ ಅಂದ್ರೆ ತುಳಸಿ ಟೀ. ಹೌದು ಪ್ರತಿನಿತ್ಯ ಮನೆ ಮುಂದೆ ದೇವರೆಂದು ಪೂಜಿಸುವ, ಔಷಧಿಯ ಗುಣ ಹೊಂದಿರುವ ಈ ತುಳಸಿಯನ್ನು ಬಳಸಿ ಚಹ ತಯಾರಿಸಿ ಕುಡಿದರೆ ಒಣ ಕೆಮ್ಮು ಶಮನವಾಗುತ್ತೆ.
ಒಂದು ಕಪ್ ನೀರಿಗೆ ಏಳೆಂಟು ತುಳಸಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಬೇಕು. ನಂತರ ಸ್ವಲ್ಪಹೊತ್ತು ಬಿಟ್ಟು ಬಿಸಿ ಬಿಸಿಯಾದ ಕಷಾಯವನ್ನು ಕುಡಿದರೆ ಒಣಕೆಮ್ಮು ವಾಸಿಯಾಗುತ್ತೆ.
ಈ ತುಳಸಿ ಟೀಗೆ ಬೇಕು ಅನ್ನಿಸಿದ್ರೆ, ಶುಂಠಿ ರಸ, ಕಾಳು ಮೆಣಸು, ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದು ಕೂಡಾ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಪ್ರತಿದಿನ ಎರಡು ತುಳಸಿ ಎಲೆಗೆ ಜೇನುತುಪ್ಪ ಸೇರಿಸಿ ಎರಡು ಬಾರಿ ಸೇವಿಸಿದ್ರೆ, ಯಾವ ರೋಗ ರುಜಿನಗಳು ನಿಮ್ಮ ಬಳಿ ಸುಳಿಯಲ್ಲ.