alex Certify ವಿನಾಕಾರಣ ಓಡಾಡಿದ್ರೆ ವಾಹನ ಸೀಜ್, ಎಲ್ಲಾ ಕಡೆ ಕಟ್ಟುನಿಟ್ಟಿನ ಕ್ರಮ: ಕೊರೊನಾ ಲಸಿಕೆ ಅಕ್ರಮ ಮಾರಾಟ ಮಾಡಿದ್ರೆ ಹುಷಾರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿನಾಕಾರಣ ಓಡಾಡಿದ್ರೆ ವಾಹನ ಸೀಜ್, ಎಲ್ಲಾ ಕಡೆ ಕಟ್ಟುನಿಟ್ಟಿನ ಕ್ರಮ: ಕೊರೊನಾ ಲಸಿಕೆ ಅಕ್ರಮ ಮಾರಾಟ ಮಾಡಿದ್ರೆ ಹುಷಾರ್..!

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳ ಕಾಲ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಅಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಸೂಚಿಸಿದ್ದೇನೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಶಹರ, ನಗರ ಪ್ರದೇಶ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ. ಬ್ಯಾರಿಕೇಡಿಂಗ್ ವ್ಯವಸ್ಥೆಯನ್ನು ಹೆಚ್ಚು ಮಾಡುವಂತೆ ಸೂಚಿಸಲಾಗಿದೆ.  ಕೆಲ ರಸ್ತೆಗಳ ಸಂಚಾರದಲ್ಲಿ ನಿರ್ಬಂಧ ವಿಧಿಸುವಂತೆ ಹೇಳಿದ್ದೇನೆ. ಅನವಶ್ಯಕವಾಗಿ ಓಡಾಡುವುದಕ್ಕೆ ಸಂಪೂರ್ಣವಾಗಿ ನಿರ್ಬಂಧ ಮಾಡಬೇಕು. ವಾಹನ ತಪಾಸಣೆ ಬಿಗಿಗೊಳಿಸಬೇಕು. ವಿನಾಕರಣ ಓಡಾಡುವುದು ಖಚಿತವಾದರೆ ವಾಹನಗಳನ್ನು ಸೀಸ್ ಮಾಡುವ ಕೆಲಸ  ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆ ಅಕ್ರಮ ಮಾರಾಟ ಮಾಡಿದರೆ ಹುಷಾರ್:

ಜನರ ಜೀವ ಉಳಿಸುವ ಕೊರೋನಾ ಲಸಿಕೆಯನ್ನು ದುಡ್ಡಿನ ಆಸೆಗಾಗಿ ಕಳ್ಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಈಗಾಗಲೇ ಲಸಿಕೆಯನ್ನು ಅಕ್ರಮವಾಗಿ ಸಂಗ್ರಹ ಮಾಡಿರುವುದು, ಸಾಗಾಟ ಮಾಡಿರುವುದು ಕಂಡುಬಂದಿದೆ. ಈ ಅಪರಾಧದಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಶಾಮೀಲಾಗಿರುವುದು ಕೂಡ ಪತ್ತೆಯಾಗಿದೆ.  ಇದು ನಿಜಕ್ಕೂ ಅಕ್ಷಮ್ಯ ಅಪರಾಧ.  ಜನರ ಜೀವ ಉಳಿಸುವ ಲಸಿಕೆಯನ್ನು ಹಣದ ಆಸೆಗೆ ಅಕ್ರಮವಾಗಿ ಮಾರಾಟ ಮಾಡಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ರಾಜ್ಯಕ್ಕೆ ಕೆಲ ದಿನಗಳಲ್ಲಿ ಲಸಿಕೆ ಸರಬರಾಜು ಆಗಲಿದೆ. ಯಾವ ರೀತಿ ರೆಮ್ ಡಿಸಿವಿರ್ ಗೆ ಇದ್ದ ಬೇಡಿಕೆ ಕಡಿಮೆಯಾಯಿತೋ ಅದೇ ರೀತಿ ಲಸಿಕೆಗೂ ಬೇಡಿಕೆ ಕಡಿಮೆಯಾಗಲಿದೆ ಎಂಬ ವಿಶ್ವಾಸ ಇದೆ.  ಎರಡನೇ ಹಂತದ ಲಸಿಕೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಬೆಲೆ ನಿಗದಿ ಮಾಡಿರುವ ಹಾಗೂ ದರ ನಿಗದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ‌ ತೀರ್ಮಾನ ಆಗಬೇಕು ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...