
ಬೆಂಗಳೂರು: ಕೆ.ಪಿ.ಎಸ್.ಸಿ. ಪರೀಕ್ಷೆ ನೇಮಕಾತಿ ಅಕ್ರಮಗಳಿಗೆ ತಡೆಹಾಕಲು ಸರ್ಕಾರ ಮುಂದಾಗಿದ್ದು, ಪರೀಕ್ಷೆ ವಿಧಾನ ಬದಲಿಗೆ ಪರಿಶೀಲನೆ ನಡೆಸಿದೆ. ಆನ್ಲೈನ್ನಲ್ಲಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ.
ವಿಧಾನಪರಿಷರ್ ನಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಜೊತೆಗೆ ಸಂದರ್ಶನವಿಲ್ಲದೆ ನೇಮಕಾತಿ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಪ್ರದೀಪ್ ಶೆಟ್ಟರ್ ಅವರ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿದ ಸಚಿವರು, ನೇಮಕಾತಿ ವಿಧಾನದಲ್ಲಿ ಪಾರದರ್ಶಕತೆ ಮತ್ತು ಸಂದರ್ಶನ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಆನ್ಲೈನ್ ಮೂಲಕವೇ ಎಫ್.ಡಿ.ಸಿ., ಎಸ್.ಡಿ.ಸಿ. ಹುದ್ದೆಗಳಿಗೆ ಪ್ರಿಲಿಮ್ಸ್ ಪರೀಕ್ಷೆ ನಂತರ ಮುಖ್ಯ ಪರೀಕ್ಷೆ ನಡೆಸಿ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸದೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.