ಬೆಂಗಳೂರು: ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಷೇಧಕ್ಕೆ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಯುವಕರು, ಮಕ್ಕಳ ಭವಿಷ್ಯಕ್ಕೆ ಆನ್ಲೈನ್ ಗೇಮ್ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಗೇಮ್ ನಿಷೇಧಿಸುವ ಕುರಿತಾಗಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಯುವಕರು ಆನ್ಲೈನ್ ಗೇಮ್ ಗಳಿಗೆ ಬಲಿಯಾಗುತ್ತಿದ್ದು, ಹಣ, ಮನೆ, ಆಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಕಾನೂನು ಜಾರಿಗೆ ತರಲಿದೆ. ಅನೇಕ ರಾಜ್ಯಗಳಲ್ಲಿ ಆನ್ಲೈನ್ ಗೇಮ್ ನಿಷೇಧಿಸಿದ್ದು, ಅಲ್ಲಿನ ನಿಯಮಗಳ ಅಧ್ಯಯನ ನಡೆಸಿ ರಾಜ್ಯದಲ್ಲಿಯೂ ನಿಷೇಧಕ್ಕೆ ಕಾನೂನು ತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ.