ಬಾಗಲಕೋಟೆ: ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗುನಗುತ್ತಲೇ ಸಚಿವ ಮುರುಗೇಶ ನಿರಾಣಿ ಅವರ ಕಾಲೆಳೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಾತನಾಡಿದ ಸಿಎಂ, ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆದರೆ, ಮುರುಗೇಶ್ ನಿರಾಣಿ ನನ್ನನ್ನೇ ಕರೆದುಕೊಂಡು ಅಲ್ಲಿಗೆ ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಗೊತ್ತಾಗುತ್ತೆ ಎಂದು ಕರೆದೊಯ್ದಿಲ್ಲ. ಚಿಂತೆ ಮಾಡಬೇಡಿ, ನಾನು ಮತ್ತೆ ಮುಖ್ಯಮಂತ್ರಿಯಾಗಿ ಬೀಳಗಿಗೆ ಬರುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಂತೆ ನಮ್ಮದು ಬೋಗಸ್ ಗ್ಯಾರಂಟಿ ಅಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಿಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡಿ. ನಮ್ಮ ಅವಧಿಯ ಅಭಿವೃದ್ಧಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲವನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ದೀನ ದಲಿತರು ಹಿಂದುಳಿದವರನ್ನು 5 ವರ್ಷ ಬಾವಿಯಲ್ಲಿ ಹಾಕ್ತಿರಾ? ಚುನಾವಣೆ ಬಂದಾಗ ಮೇಲೆತ್ತಿ ಮತ್ತೆ ಬಾವಿಯಲ್ಲಿ ಹಾಕುವುದು ನಿಮ್ಮ ಕೆಲಸ. ಈಗ ಸಮುದಾಯಗಳಿಗೆ ಅರಿವಾಗಿದೆ. ಎಸ್ ಎಸ್ಸಿ ಎಸ್ಟಿ ಮೀಸಲಾತಿ ವಿಚಾರಕ್ಕೆ ಕೈ ಹಾಕಬೇಡಿ ಎಂದು ಹೇಳಿದರು ಆ ಸಮುದಾಯಗಳಿಗೆ ನ್ಯಾಯ ಕೊಡಿಸಲು ಜೇನುಗೂಡಿಗೆ ಕೈ ಹಾಕಿದೆ ಎಂದರು.