ಬೆಂಗಳೂರು : ‘ವರ್ಗಾವಣೆ ದಂಧೆ’ ಬಗ್ಗೆ ಸದನದಲ್ಲಿ ದೊಡ್ಡ ಮಟ್ಟದ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವರ್ಗಾವಣೆ ದಂಧೆ’ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಅವರ ದಾಖಲೆಗಳನ್ನು ಇಡಲಿ, ನಮ್ಮ ಬಳಿಯಿರುವ ದಾಖಲೆಗಳನ್ನ ನಾವು ಇಡುತ್ತೇವೆ. ವರ್ಗಾವಣೆ ದಂಧೆ ಬಗ್ಗೆ ಸದನದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವರ್ಗಾವಣೆ ದಂಧೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಗುಡುಗಿದ್ದು, ಕಾಂಗ್ರೆಸ್ ಯೋಗ್ಯತೆಗೆ ಬಿಜೆಪಿ ಅವಧಿಯಲ್ಲಿ ಒಂದೇ ಒಂದು ದಾಖಲೆ ಕೊಡಲು ಆಗಿಲ್ಲ. ಈಗ ಕಮಿಷನ್ ಆರೋಪಕ್ಕೆ ನನ್ನ ಬಳಿ ದಾಖಲೆ ಕೇಳುತ್ತಿದ್ದಾರೆ. ನಾನು ದಾಖಲೆ ಕೊಡಲು ಸಿದ್ಧ ಎಂದರು.ಸಿಎಂ ಗೃಹಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ದಾಖಲೆ ಕೊಡಲು ನಾನು ಸಿದ್ಧ ತನಿಖೆ ನಡೆಸುವ ಧಮ್ ಇವರಿಗಿದ್ಯಾ? ದಾಖಲೆ ಕೊಟ್ಟ ಮೇಲೆ ಯಾವ ಮಂತ್ರಿಯ ಅಡಿಯಲ್ಲಿ ಕಮಿಷನ್ ದಂಧೆ ನಡೆದಿದೆ. ಆ ಮಂತ್ರಿ ವಜಾ ಮಾಡಲು ನಿಮಗೆ ತಾಕತ್ತಿದೆಯೇ? ಎಂದು ಪ್ರಶ್ನಿಸಿದರು.ನನ್ನ ಕಾಲದಲ್ಲಿ ನಡೆದ ವರ್ಗಾವಣೆ ಬಗ್ಗೆಯೂ ತನಿಖೆಯಾಗಲಿ ಎಂದು ಸವಾಲು ಹಾಕಿದರು. ಇನ್ನು ಹನಿಮೂನ್ ಪೀರಿಯಡ್ ಎಂದು ಹೇಳುತ್ತಿದ್ದೀರಿ. ಅಧಿಕಾರಕ್ಕೆ ಬಂದು ಒಂದುವರೆ ತಿಂಗಳಿಗೆ ಕಾಂಗ್ರೆಸ್ ನಿಂದ ಹಗಲು ದರೋಡೆ ನಡೆಯುತ್ತಿದೆ. ವರ್ಗಾವಣೆ ದಂಧೆಗೆ ಎಷ್ಟು ಹಣ ನಿಗದಿ ಮಾಡಿದ್ದೀರಿ ಎಂದು ಗೊತ್ತಿದೆ. ಸದನದಲ್ಲಿಯೇ ಉತ್ತರ ನೀಡುತ್ತೇನೆ ಎಂದು ಗುಡುಗಿದ್ದಾರೆ.