ಚಿಕ್ಕಮಗಳೂರು : ವಿರೋಧ ಪಕ್ಷದ ನಾಯಕ ಯಾರು ಎಂದು ನಾಳೆ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ( Basavaraj Bommai ) ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ‘ಮಾಜಿ ಸಚಿವ ಆರ್ ಅಶೋಕ್ ಹುಟ್ಟು ಹಬ್ಬದ ಆಚರಣೆಗಾಗಿ ಚಿಕ್ಕಮಗಳೂರಿಗೆ ಬಂದಿದ್ದೇವೆ, ಬಹಳ ದಿನಗಳ ನಂತರ ಸಮಯ ಸಿಕ್ಕಿದೆ. ಹಾಗಾಗಿ ಬಂದಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜಕೀಯ ಚರ್ಚೆ ನಡೆಸಲು ಇಷ್ಟು ದೂರ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಯಾರು ಎಂಬುದರ ಬಗ್ಗೆ ನಾಳೆ ಮಾಹಿತಿ ನೀಡುತ್ತೇವೆ, ಎಂದು ನಾಳೆ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ