ಹಿಂದೂ ಧರ್ಮದಲ್ಲಿ ಬಸಂತ ಪಂಚಮಿಗೆ ವಿಶೇಷ ಮಹತ್ವವಿದೆ. ಅದನ್ನು ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ. ಫೆಬ್ರವರಿಯಲ್ಲಿ ವಸಂತ ಕಾಲದಲ್ಲಿ ಬರುವ ಹಬ್ಬ ಇದು. ಜ್ಞಾನ, ಕಲಿಕೆ, ಸಂಗೀತದ ದೇವತೆಯಾಗಿರುವ ಸರಸ್ವತಿಯನ್ನು ಈ ದಿನ ಪೂಜೆ ಮಾಡಲಾಗುತ್ತದೆ. ಈ ಬಾರಿ ಫೆಬ್ರವರಿ 13ರ ಮಧ್ಯಾಹ್ನ 2.41ಕ್ಕೆ ಬಸಂತ ಪಂಚಮಿ ಶುರುವಾಗಲಿದೆ. ಫೆಬ್ರವರಿ 14 ರಂದು 12.09ಕ್ಕೆ ಮುಕ್ತಾಯವಾಗಲಿದೆ.
ಬಸಂತ ಪಂಚಮಿಯಂದು ನೀವು ಮದುವೆ ಸೇರಿದಂತೆ ಹೊಸ ಕೆಲಸಗಳನ್ನು ಶುರು ಮಾಡಲು ಮಂಗಳವೆಂದು ಪರಿಗಣಿಸಲಾಗಿದೆ.
ಬಸಂತ ಪಂಚಮಿ ಆಚರಿಸುವ ಜನರು, ಅಂದು ಯಾವೆಲ್ಲ ಆಹಾರವನ್ನು ತಾಯಿ ಸರಸ್ವತಿಗೆ ಅರ್ಪಿಸಬೇಕು ಎಂಬುದನ್ನು ತಿಳಿಯಬೇಕು. ಹಾಗೆ ಯಾವ ಕೆಲಸ ಮಾಡಬೇಕು ಎಂಬುದನ್ನು ಅರಿತಿರಬೇಕು.
- ಬಸಂತ ಪಂಚಮಿಯ ದಿನದಂದು ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಳದಿ ಲಡ್ಡನ್ನು ನೀವು ತಾಯಿಗೆ ನೀಡಬಹುದು.
- ಈ ದಿನ ಸರಸ್ವತಿ ದೇವಿಯ ಪೂಜೆಗಾಗಿ ಹಳದಿ ಕೇಸರಿ ಅನ್ನವನ್ನು ತಯಾರಿಸಿ ತಾಯಿಗೆ ಅರ್ಪಿಸಿ. ಇದರಿಂದ ಮನೆಯಲ್ಲಿರುವ ದುಃಖ ದೂರವಾಗುತ್ತದೆ.
- ವಿದ್ಯಾರ್ಥಿಗಳು ಇಂದು ಸರಸ್ವತಿಯ ಪೂಜೆ ಮಾಡಬೇಕು. ಇದ್ರಿಂದ ವಿದ್ಯೆ ಅವರಿಗೆ ಪ್ರಾಪ್ತಿಯಾಗುತ್ತದೆ.
- ಬಸಂತ ಪಂಚಮಿ ದಿನ ಹಳದಿ ಬಟ್ಟೆಯನ್ನು ಧರಿಸಬೇಕು.
- ನೀವು ಬಡ ಮಕ್ಕಳಿಗೆ ಪುಸ್ತಕ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು.
- ತಾಯಿ ಸರಸ್ವತಿಯನ್ನು ಮಾತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಬಸಂತ ಪಂಚಮಿಯ ದಿನದಂದು ತಪ್ಪಾಗಿಯೂ ತಪ್ಪು ಮಾತನಾಡಬೇಡಿ.
- ಬಸಂತ ಪಂಚಮಿಯ ದಿನದಂದು ಸರಸ್ವತಿ ದೇವಿಯನ್ನು ಪೂಜಿಸಿದ ನಂತರವೇ ಆಹಾರ ಸೇವಿಸಿ. ಸಾಧ್ಯವಾದರೆ ಉಪವಾಸ ಮಾಡಿ.
- ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಾಂಸವನ್ನು ಸೇವಿಸಬೇಡಿ. ಯಾವುದೇ ರೀತಿಯ ಅಮಲು ತೆಗೆದುಕೊಳ್ಳುವುದನ್ನು ಸಹ ನಿಲ್ಲಿಸಿ.