ರಾಜಸ್ಥಾನದ ಬರೇಲಿಯಲ್ಲಿ ಖಾಸಗಿ ಶಾಲೆಯೊಂದು ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .
ಪರೀಕ್ಷೆಗೆ ಹಾಜರಾಗದಂತೆ ತಡೆದ ನಂತರ 14 ವರ್ಷದ ತಮ್ಮ ಮಗಳು ತನ್ನ ಜೀವವನ್ನು ಕೊನೆಗೊಳಿಸಿಕೊಂಡಿದ್ದಾಳೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
“ನನ್ನ ಮಗಳು ಸ್ಥಳೀಯ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಳು. ಹಣಕಾಸಿನ ಅಡಚಣೆಗಳಿಂದ ನಾನು ಅವಳ ಶಾಲಾ ಶುಲ್ಕವನ್ನು ಜಮಾ ಮಾಡಲು ಸಾಧ್ಯವಾಗಲಿಲ್ಲ” ಎಂದು ಬಾಲಕಿಯ ತಂದೆ ಬಾರಾದರಿ ನಿವಾಸಿ ಅಶೋಕ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಮಗಳು ನೊಂದುಕೊಂಡು ಮನೆಗೆ ಹಿಂದಿರುಗಿದ ನಂತರ ನೇಣು ಬಿಗಿದುಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ.
ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ರಾಹುಲ್ ಭಾಟಿ ತಿಳಿಸಿದ್ದಾರೆ.