ಬಾರ್ಬಿ ಡಾಲ್ ಜೊತೆ ಬೈಕ್ ರೈಡಿಂಗ್; ಫೋಟೋ ವೈರಲ್ 20-03-2023 7:45AM IST / No Comments / Posted In: Latest News, India, Live News ಮೊಬೈಲ್ ಮತ್ತು ಇಂಟರ್ನೆಟ್ ಬಂದಾಗಿನಿಂದ ಪ್ರಪಂಚ ಚಿಕ್ಕದಾಗಿದೆ ಅನಿಸುತ್ತೆ. ವಿಶ್ವದ ಯಾವುದೇ ಮೂಲೆಯಲ್ಲಿ ಜರುಗುವ ವಿದ್ಯಮಾನ, ಘಟನೆ ಮತ್ತು ವಿಚಿತ್ರ ಸನ್ನಿವೇಶಗಳು ಕ್ಷಣಮಾತ್ರದಲ್ಲಿ ಗಮನ ಸೆಳೆದು ವೈರಲ್ ಆಗುತ್ತವೆ. ಅಂತಹ ಸಾಲಿಗೆ ಮತ್ತೊಂದು ಸನ್ನಿವೇಶ ಸೇರಿದೆ. ದೆಹಲಿಯಲ್ಲಿ ಬೈಕ್ ನಲ್ಲಿ ವ್ಯಕ್ತಿ ಯೊಬ್ಬರು ಬಾರ್ಬಿ ಡಾಲ್ ನ ಹಿಂಬದಿಯಲ್ಲಿ ಕೂರಿಸಿಕೊಂಡು ರೌಂಡ್ ಹಾಕಿದ್ದಾರೆ. ಪುಟ್ಟ ಬಾರ್ಬಿ ಡಾಲ್ ನ ಬೆಲ್ಟ್ ನಿಂದ ಬಿಗಿ ಮಾಡಿದ್ದು ದೇಶೀಯ ವ್ಯಕ್ತಿಯು ಅದನ್ನ ತಮ್ಮ ಹಿಂದುಗಡೆ ಸೀಟ್ ನಲ್ಲಿ ಕೂರಿಸಿಕೊಂಡು ಹೋಗ್ತಿದ್ದಾರೆ. ಈ ಫೋಟೋವನ್ನ ಕಬೀರ್ ತನೇಜಾ ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದು ಇದರ ಹಿಂದಿನ ಕಾರಣ ತಿಳಿಯಲು ಕುತೂಹಲ ತೋರಿಸಿದ್ದಾರೆ. ಈ ಬಗ್ಗೆ ಹಲವು ನೆಟ್ಟಿಗರು ಸಹ ಕುತೂಹಲದಿಂದಿದ್ದು ಈ ವಿಲಕ್ಷಣ ದೃಶ್ಯದ ಹಿಂದಿನ ಕಾರಣದ ಬಗ್ಗೆ ಆಶ್ಚರ್ಯ ಪಡುತ್ತಾರೆ. ಸಾಮಾಜಿಕ ಜಾಲತಾಣದ ಓರ್ವ ಬಳಕೆದಾರರು “ಇದು ಅವರ ಮಗಳು ಮಾಡಿದ ಕೃತ್ಯ ಎಂದು ಖಚಿತವಾಗಿ ತಿಳಿದಿದೆ !!” ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ತನ್ನ ಮಗಳನ್ನು ಪ್ರಶ್ನಿಸದೆ ತಂದೆ ವಿಧೇಯತೆಯಿಂದ ಮಗಳ ಸೂಚನೆಗಳನ್ನು ಅನುಸರಿಸಬಹುದು ಎಂದಿದ್ದಾರೆ. “ಇದು ನಿಜವಾಗಿ ನೆಟ್‌ಫ್ಲಿಕ್ಸ್ ಸರಣಿಯಾಗಿರಬಹುದು ಆದರೆ ಮುದ್ದಾದದಲ್ಲ. ಸಂಪೂರ್ಣ ಭಯಾನಕ ಕ್ರೂರವಾಗಿದೆ” ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. One really sees some very random stuff on Delhi’s roads… pic.twitter.com/Dt2WBROIJg — Kabir Taneja (@KabirTaneja) March 18, 2023