ಹೇರ್ ಕಟ್ ಮಾಡುವುದು ಕೂಡ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಪೈಪೋಟಿ ಜಾಸ್ತಿ ಇರುವುದರಿಂದ ಕ್ಷೌರಿಕರು ವಿಭಿನ್ನ ಹೇರ್ ಕಟ್ ಮಾಡುವುದನ್ನು ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದೆಡೆ ಒಡಹುಟ್ಟಿದವರು ಮಾಡುತ್ತಿರುವ ಕ್ಷೌರವು ಬಹಳ ಖ್ಯಾತಿ ಪಡೆದಿದೆ.
ಪಂಜಾಬಿನ ದಬ್ವಾಲಿ ಪಟ್ಟಣದಲ್ಲಿ ಸಹೋದರರಾದ ರಾಜವಿಂದರ್ ಸಿಂಗ್ ಸಿಧು ಮತ್ತು ಗುರ್ವಿಂದರ್ ಸಿಂಗ್ ಸಿಧು ಅವರು, ಗ್ರಾಹಕರ ಆಯ್ಕೆಯ ಚಿತ್ರಗಳಲ್ಲಿ ಹೇರ್‌ಕಟ್‌ಗಳನ್ನು ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಇವರು ಹೇರ್‌ಕಟ್ ಗಳನ್ನು ಅದ್ಭುತ ಕಲಾಕೃತಿಗಳಾಗಿ ಪರಿವರ್ತಿಸುತ್ತಿದ್ದಾರೆ.
ತಾಜ್ ಮಹಲ್‌ನಿಂದ ಹಿಡಿದು ಅದರ ಹಲವು ಗೋಪುರಗಳು ಮತ್ತು ಗೋಪುರಗಳಿಂದ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ಅವರ ಭಾವಚಿತ್ರದವರೆಗೆ ಈ ಸಹೋದರರು ಕೇಶ ವಿನ್ಯಾಸ ಮಾಡುತ್ತಿದ್ದಾರೆ. ಇತರ ಪರಿಕರಗಳ ನಡುವೆ ಟ್ರಿಮ್ಮರ್‌ಗಳು, ಕತ್ತರಿ ಮತ್ತು ಪೆನ್ಸಿಲ್ ಗಳನ್ನು ಇದಕ್ಕಾಗಿ ಬಳಸುತ್ತಾರೆ.
ಇದೀಗ ಈ ಸಹೋದರರು ತಮ್ಮ ವ್ಯಾಪಾರವನ್ನು ಭಾರತದ ಹೊರಗೆ ಕೂಡ ಮಾಡುವ ಯೋಜನೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ತಲೆಯ ಹಿಂಭಾಗದಲ್ಲಿ ಈ ಸೋದರರು ಅದ್ಭುತ ಕಲಾಕೃತಿಗಳನ್ನು ಬಿಡಿಸುತ್ತಿದ್ದಾರೆ.
ಬಾಲಿವುಡ್ ತಾರೆಯರ ಚಿತ್ರಗಳಿಗಾಗಿ ವಿನಂತಿಗಳಿಂದ ಹಿಡಿದು ಜನಪ್ರಿಯ ಕ್ರೀಡಾಪಟುಗಳವರೆಗೆ ಚಿತ್ರ ಬಿಡಿಸುವಂತೆ ಗ್ರಾಹಕರು ದುಂಬಾಲು ಬೀಳುತ್ತಿದ್ದಾರಂತೆ.