ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನು ಮಾಡೋದಕ್ಕೂ ಹೇಸೋಲ್ಲ ಅನ್ನೊದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತೆ. ಆದರೆ ಅಂಥವರ ನಡುವೆಯೇ ಕೆಲ ಅಪರೂಪದ ವ್ಯಕ್ತಿತ್ವಗಳಿವೆ ಅವರ ಹೃದಯ ಇನ್ನೊಬ್ಬರ ಕಷ್ಟಗಳಿಗೆ ಸದಾ ಸ್ಪಂದಿಸ್ತಾನೇ ಇರುತ್ತೆ. ಅದನ್ನು ಅವರು ವ್ಯಕ್ತಪಡಿಸುವ ರೀತಿಯೇ ಅದ್ಭುತವಾಗಿರುತ್ತೆ. ಅದಕ್ಕೆ ಬೆಸ್ಟ್ ಉದಾಹರಣೆಯಾಗಿದೆ ಈ ಒಂದು ವಿಡಿಯೋ. ಈ ವಿಡಿಯೋ ನೋಡ್ತಿದ್ರೆ ನೀವು ಭಾವುಕರಾಗಿ ಬಿಡೋದು ಗ್ಯಾರಂಟಿ.
ಈ ವಿಡಿಯೋ 1 ನಿಮಿಷ 21 ಸೆಕೆಂಡ್‌ನದ್ದಾಗಿದೆ. ಇಲ್ಲಿ ಮಹಿಳೆಯೊಬ್ಬರು ಬಂದು ಚೇರ್ ನಲ್ಲಿ ಕೂರುತ್ತಾರೆ. ಬಳಿಕ ಕ್ಷೌರಿಕನು ರೇಜರ್‌ನಿಂದ ಮಹಿಳೆಯ ಕೂದಲನ್ನು ಕತ್ತರಿಸುತ್ತಾ ಹೋಗುತ್ತಾನೆ. ಆ ಸಮಯದಲ್ಲಿ ಆಕೆ ಬಿಕ್ಕಿ ಬಿಕ್ಕಿ ಅಳುವುದನ್ನು ಕಾಣಬಹುದು. ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಯುತ್ತಿದ್ದಂತೆ ಮಹಿಳೆಗೆ ಅಳು ತಡೆದು ಕೊಳ್ಳೊದಕ್ಕೆ ಸಾಧ್ಯವೇ ಆಗೋಲ್ಲ.
ಬಳಿಕ ಆ ಕ್ಷೌರಿಕನು ಆಕೆಯನ್ನ ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಿಸುತ್ತಾನೆ. ಅಪ್ಪಿಕೊಂಡು ಸಂತೈಸಲು ನೋಡಿದರೂ ಆಕೆಯ ನೋವು ಕಡಿಮೆ ಆಗುವುದಿಲ್ಲ. ಆಗ ಆತ ಮತ್ತೊಂದು ಕೈಯಲ್ಲಿ ರೇಜರ್ ಹಿಡಿದು ತನ್ನ ಕೂದಲನ್ನೂ ಬೋಳಿಸಿಕೊಳ್ಳುತ್ತಾ ಹೋಗುತ್ತಾನೆ. ಕ್ಷೌರಿಕನ ಈ ನಡೆ ಕಂಡು ಒಮ್ಮೆ ಶಾಕ್ ಆದ ಮಹಿಳೆ ಆತನನ್ನು ತಡೆಯಲು ಮುಂದಾಗುತ್ತಾಳೆ. ಆದರೆ, ತನ್ನ ನಿರ್ಧಾರದಿಂದ ಹಿಂಜರಿಯದ ಕ್ಷೌರಿಕ ತನ್ನ ಕೆಲಸವನ್ನು ಮುಂದುವರೆಸುತ್ತಾನೆ.
ಅಸಲಿಗೆ ಆ ಮಹಿಳೆ ಕ್ಯಾನ್ಸರ್ ಪೀಡಿತಳಾಗಿರುತ್ತಾಳೆ. ಓರ್ವ ಕ್ಯಾನ್ಸರ್ ರೋಗಿಯು ಅನೇಕ ಕಿಮೊಥೆರಪಿ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇಂತಹ ಕಠಿಣ ಕಾಯಿಲೆಯ ವಿರುದ್ಧ ಹೋರಾಡುವವರಿಗೆ ಅವರ ಸುತ್ತಮುತ್ತಲಿನ ಜನ, ಕುಟುಂಬ, ಸ್ನೇಹಿತರು ಆಸರೆಯಾಗಿ, ಮನೋಧೈರ್ಯವನ್ನು ತುಂಬುತ್ತಾರೆ. ಆದರಲ್ಲಿ ಕ್ಷೌರಿಕನೊಬ್ಬ ಕ್ಯಾನ್ಸರ್ ರೋಗಿಯನ್ನು ಸಮಾಧಾನಪಡಿಸುವ ಸಲುವಾಗಿ ತನ್ನ ಕೂದಲನ್ನೇ ಬೋಳಿಸಿಕೊಂಡಿದ್ದಾನೆ.
ತನ್ನ ಈ ಕಾರ್ಯದ ಮೂಲಕ ಕ್ಷೌರಿಕನು ಜೀವನದಲ್ಲಿ ಯಾರೂ ಒಬ್ಬಂಟಿಯಲ್ಲ ಎಂಬ ಸಂದೇಶವನ್ನು ಸಾರಿದನು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದುವರೆಗೂ 12.1 ಮಿಲಿಯನ್ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದನ್ನು 950ಕ್ಕೂ ಹೆಚ್ಚು ಜನರು ರೀ ಟ್ವೀಟ್ ಮಾಡಿದ್ದರೆ, ಐದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.