ಬೆಂಗಳೂರು: ವ್ಯಕ್ತಿಯೋರ್ವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಲಕ್ಕಸಂದ್ರದಲ್ಲಿ ನಡೆದಿದೆ.
ಹತ್ಯೆಯಾದವರನ್ನು ಜೈ ಪ್ರಕಾಶ್ ಅಲಿಯಾಸ್ ಪಪ್ಪಿ ಎಂದು ಗುರುತಿಸಲಾಗಿದೆ. ಹಂತಕರು ಕಿ.ಮೀಗಟ್ಟಲೇ ಅಟ್ಟಿಸಿಕೊಂಡು ಬಂದಿದ್ದು, ಲಕ್ಕಸಂದ್ರದ ಹೋಟೆಲ್ ಒಳಗೆ ಆತ ನುಗ್ಗಿದ್ದು, ಅಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಹತ್ಯೆಯಾದ ಜೈಪ್ರಕಾಶ್ 2009ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಬಂದಿದ್ದನು ಎನ್ನಲಾಗಿದ್ದು, ಹಳೆ ದ್ವೇಷದ ಹಿನ್ನೆಲೆ ಆತನ ಹತ್ಯೆಯಾದ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.