alex Certify 1 ಸ್ಟಾರ್​ ರೇಟಿಂಗ್​ ಕೊಟ್ಟ ಗ್ರಾಹಕಿಗೆ ಟ್ವಿಟರ್​ನಲ್ಲೇ ಬಾರ್​ ಮಾಲೀಕನ ಟಾಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಸ್ಟಾರ್​ ರೇಟಿಂಗ್​ ಕೊಟ್ಟ ಗ್ರಾಹಕಿಗೆ ಟ್ವಿಟರ್​ನಲ್ಲೇ ಬಾರ್​ ಮಾಲೀಕನ ಟಾಂಗ್…!

ದೊಡ್ಡ ದೊಡ್ಡ ಬಾರ್​ ಹಾಗೂ ರೆಸ್ಟಾರೆಂಟ್​ಗಳಿಗೆ ಭೇಟಿ ನೀಡಿದ ಬಳಿಕ ನಿಮಗೆ ಆ ಸ್ಥಳ ಇಷ್ಟವಾದಲ್ಲಿ ಅಥವಾ ಇಷ್ಟವಾಗದೇ ಹೋದಲ್ಲಿ ನಿಮ್ಮ ಅಭಿಪ್ರಾಯವನ್ನ ಹೊರಹಾಕಲು ಗೂಗಲ್​ನಲ್ಲಿ ಅವಕಾಶ ಇರುತ್ತದೆ. ನೀವು ಕೊಡುವ ರೇಟಿಂಗ್​ಗಳು ಆ ಸ್ಥಳದ ಜನಪ್ರಿಯತೆಯನ್ನ ಹೆಚ್ಚಿಸಲು ಅಥವಾ ಕುಗ್ಗಿಸಲು ಕಾರಣವಾಗುತ್ತದೆ.

ಆದರೆ ಐರ್ಲೆಂಡ್​​ನ ಬೆಲಿಫಾಸ್ಟ್​ ಎಂಬಲ್ಲಿ ಬಾರ್​ನ್ನು ಹೊಂದಿದ್ದ ಮಾಲೀಕನೊಬ್ಬ ಗ್ರಾಹಕಿ ನೀಡಿದ ರೇಟಿಂಗ್​ ನೋಡಿ ಶಾಕ್​ ಆಗಿದ್ದಾರೆ.
ಕೆಲ್ವಿನ್​ ಕೊಲಿನ್ಸ್ ಎಂಬವರ ಮಾಲೀಕತ್ವದ ಬೆನ್​ ಮ್ಯಾಡಿಗನ್ಸ್ ಎಂಬ ಬಾರ್​​ ಬಗ್ಗೆ ಮಹಿಳೆ : ಮುಖ್ಯವಾದ ಮೀಟಿಂಗ್​ ಇದ್ದ ಹಿನ್ನೆಲೆ ಮಧ್ಯಾಹ್ನದ ವೇಳೆಗೆ ನಾನು ಈ ಬಾರ್​ಗೆ ಭೇಟಿ ನೀಡಿದ್ದೆ. ಈ ಬಾರ್​ ಸಂಪೂರ್ಣ ಖಾಲಿ ಖಾಲಿಯಾಗಿದೆ. ಇಲ್ಲಿ ಕೇವಲ ಇಬ್ಬರು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸ್ತಾ ಇದ್ದರು ಎಂದು ಹೇಳಿ ಕೇವಲ 1 ಸ್ಟಾರ್​​ ನೀಡಿದ್ದಾಳೆ.

ಪದೇ ಪದೇ ಮುಖ ತೊಳೆದುಕೊಳ್ಳುವುದು ಒಳ್ಳೆಯದಾ…..?

ಆದರೆ ವಿಚಿತ್ರ ಅಂದರೆ ಇಷ್ಟುದ್ದ ರಿವ್ಯೂವ್​ ಶೇರ್​ ಮಾಡಿದ ಈ ಮಹಿಳೆ ಬಾರ್​ಗೆ ತೆರಳಿದ್ದ ವೇಳೆ ಆರ್ಡರ್​ ಮಾಡಿದ್ದು ಒಂದು ಲೋಟ ನೀರು ಹಾಗೂ ಸಕ್ಕರೆ ಮಾತ್ರ..! ಗ್ರೀನ್​ ಟೀ ಬ್ಯಾಗ್​ನ್ನೂ ಸಹ ಈಕೆ ಮನೆಯಿಂದಲೇ ತಂದಿದ್ದಳಂತೆ.

LPG ಗ್ರಾಹಕರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್: ಆಯ್ದ ವಿತರಕರಿಂದ ಸಿಲಿಂಡರ್ ಪಡೆಯಲು ಅವಕಾಶ

ಹೀಗಾಗಿ ಈ ರಿವ್ಯೂವ್​ನ ಸ್ಕ್ರೀನ್​ಶಾಟ್​ನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ ಕೆಲ್ವಿನ್​, ನನಗೆ ಎಲ್ಲಿಂದ ಶುರು ಮಾಡಲಿ ಎಂದು ತಿಳಿಯುತ್ತಿಲ್ಲ. ನೀವು ನಮ್ಮ ಬಾರ್​ಗೆ ಬಂದು 1 ಲೋಟ ನೀರು ಹಾಗೂ ಸಕ್ಕರೆಯನ್ನ ಬಿಟ್ಟು ಇನ್ನು ಏನನ್ನೂ ಆರ್ಡರ್​ ಮಾಡೇ ಇಲ್ಲ. ಆದರೆ ಈ ಗ್ರೀನ್​ ಟೀ ಕುಡಿಯುವ ವೇಳೆ ನೀವು ನನ್ನದೇ ದುಡಿಮೆಯ ದೀಪ, ವಿದ್ಯುತ್​, ಎಸಿ, ನೀರು, ನೀವು ಕಚ್ಚಿದ ಲೋಟವನ್ನ ತೊಳೆಯಲು ಬೇಕಾದ ಸಾಬೂನು, ಸಕ್ಕರೆ ಹೀಗೆ ಅನೇಕ ಸೌಲಭ್ಯಗಳನ್ನ ಬಳಕೆ ಮಾಡಿದ್ದೀರಾ..! ನಾನು ಈ ಪಟ್ಟಿಯನ್ನ ಇನ್ನೂ ಉದ್ದ ಬೆಳೆಸಬಹುದು ಆದರೆ ಬೇಡ. 13 ತಿಂಗಳುಗಳ ಕಾಲ ನಮ್ಮ ಬಾರ್​ ಕೊರೊನಾದಿಂದಾಗಿ ಬಂದ್​ ಆಗಿತ್ತು. ಈಗಷ್ಟೇ ನಾವು ಈ ಸಂಕಷ್ಟದಿಂದ ಹೊರಬಂದಿದ್ದೇವೆ. ಈ ಸಂದರ್ಭದಲ್ಲಿ ನೀವು ಈ ರೀತಿ 1 ಸ್ಟಾರ್ ಕೊಟ್ಟಿದ್ದು ಎಷ್ಟರ ಮಟ್ಟಿಗೆ ಸರಿ..? ಒಂದು ವೇಳೆ ನೀವು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧರಿದ್ದೀರಿ ಎಂದರೆ ನಿಮ್ಮ ಜೊತೆ ನಾನು ನಗುಮೊಗದಿಂದಲೇ ಮಾತನಾಡುತ್ತೇನೆ ಎಂದು ಟ್ವೀಟಾಯಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...