alex Certify ಅಸುರಕ್ಷಿತ ಎಂದು ಭಾವಿಸುವ ಮಹಿಳಾ ಗ್ರಾಹಕರಿಗೆ ನೈಟ್‌ ಕ್ಲಬ್ ನಲ್ಲಿದೆ​ ‘ಏಂಜಲ್​ ಶಾಟ್​’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸುರಕ್ಷಿತ ಎಂದು ಭಾವಿಸುವ ಮಹಿಳಾ ಗ್ರಾಹಕರಿಗೆ ನೈಟ್‌ ಕ್ಲಬ್ ನಲ್ಲಿದೆ​ ‘ಏಂಜಲ್​ ಶಾಟ್​’

ಬಾರ್​ನಲ್ಲಿ ಅಸುರಕ್ಷಿತ ಎಂದು ಭಾವಿಸಿದ ಸಮಯಗಳು ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಬಾರ್​ ಅಟೆಂಡರ್​ ಅನ್ನು ವಿವೇಚನೆಯಿಂದ ಎಚ್ಚರಿಸಲು ಕೋಡ್​ವರ್ಡ್​ ಬಳಸುವ ವ್ಯವಸ್ಥೆಯೊಂದು ಪರಿಚಯಿಸಲಾಗಿದೆ.

ಟ್ವಿಟರ್​ನಲ್ಲಿ ಸಾಧನಾ ಎಂಬ ಬಳಕೆದಾರರು ಬಾರ್​ನೊಳಗಿನ ಮಹಿಳೆಯ ವಿಶ್ರಾಂತಿ ಕೊಠಡಿಯಲ್ಲಿ ಕಂಡುಬಂದ ಬೋರ್ಡ್​ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ನೈಟ್‌ ​ಕ್ಲಬ್​ನ ಮಹಿಳಾ ವಿಶ್ರಾಂತಿ ಕೊಠಡಿಯಾಗಿರುತ್ತದೆ.

ಬಾರ್​ಗೆ ಹೋಗಿ ‘ಏಂಜೆಲ್​ ಶಾಟ್​’ ಅನ್ನು ಕೇಳಿದರೆ, ಬಾರ್​ ಸಿಬ್ಬಂದಿ ನಿಮಗೆ ಸ್ವಲ್ಪ ಸಹಾಯ ಅಗತ್ಯವಿದೆ ಎಂದು ತಿಳಿಯುತ್ತಾರೆ ಮತ್ತು ಅವರು ಟ್ಯಾಕ್ಸಿಯಲ್ಲಿ ಕಳಿಸಲು ವ್ಯವಸ್ಥೆ ಮಾಡುತ್ತಾರೆ ಮತ್ತು ಬೆಂಗಾವಲು ನೆರವನ್ನೂ ನೀಡುತ್ತಾರೆ. ಇಂತಹ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲಲ್ಲ. ಕೆಲವು ಬಾರ್​ಗಳಲ್ಲಿ ಇಂತಹ ಸೇವೆಗಳಿವೆ.

ಈ ಶಾಟ್​ ಅನ್ನು ಯಾರು ಆರ್ಡರ್​ ಮಾಡಬಹುದು ಎಂದು ಉಲ್ಲೇಖಿಸುವಾಗ, ಔಟ್​ಲೆಟ್​ ಸ್ಪಷ್ಟಪಡಿಸಿದೆ. “ಅಸುರಕ್ಷಿತ ಅಥವಾ ಭಯದ ಭಾವನೆ ಬಂದಾಗ ಜಾನಿ ಡೆಪ್​ ಶಾಟ್​ ಅನ್ನು ಆರ್ಡರ್​ ಮಾಡಬಹುದು. ಬಾರ್​ ಶಾಟ್​ನ ಮೂರು ಮಾದರಿಗಳನ್ನು ಹೇಳಿದೆ. ಕಟ್ಟಡದ ಹೊರಗಿನ ಸಿಬ್ಬಂದಿ ಅವರನ್ನು ಬೆಂಗಾವಲು ಮಾಡುತ್ತಾರೆ. ಗ್ರಾಹಕರಿಗೆ ಸಾರಿಗೆಯನ್ನು ಒದಗಿಸಲಾಗುತ್ತದೆ. ತಮ್ಮ ಗ್ರಾಹಕರು ಸುರಕ್ಷಿತವಾಗಿರಲು ಪೊಲೀಸರ ನೆರವು ಪಡೆಯಲು ಬಾರ್​ ಹಿಂಜರಿಯುವುದಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...