ಅವಳಿ ಮಕ್ಕಳು ಜನಿಸುವುದು ಅಪರೂಪವಲ್ಲವಾದರೂ ಇದರಲ್ಲಿ ಕೆಲವೊಂದು ವಿಶೇಷತೆ ಇರುತ್ತದೆ. ವಿದೇಶಗಳಲ್ಲಿ ವರ್ಷಕ್ಕೊಮ್ಮೆ ಅವಳಿ ಮಕ್ಕಳ ಸಮಾವೇಶವೇ ನಡೆಯುತ್ತಿದ್ದು, ಇತ್ತೀಚೆಗೆ ಭಾರತದ ಕೆಲವೊಂದು ಭಾಗಗಳಲ್ಲಿ ಅವಳಿ ಮಕ್ಕಳು ಒಟ್ಟಿಗೆ ಸೇರ್ಪಡೆಯಾಗಿ ಸಂಭ್ರಮಿಸುತ್ತಾರೆ.
ಇದೀಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸಜೀಪಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಒಂದೇ ತರಗತಿಯಲ್ಲಿ ಐದು ಜೋಡಿ ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಸಂಗತಿ ವಿಶೇಷವೆನಿಸಿದೆ.
ಶಾಲೆಯ ಎಂಟನೇ ತರಗತಿಯಲ್ಲಿ ಈ ಐದು ಜೋಡಿ ಅವಳಿ ಮಕ್ಕಳು ಕಲಿಯುತ್ತಿದ್ದು, ಆಯಿಷಾ ಝಿಬಾ ಮತ್ತು ಖತೀಜಾ ಝಿಯಾ, ಶ್ರಣವಿ ಮತ್ತು ಜಾಹ್ನವಿ, ಫಾತಿಮತ್ ಕಮಿಲ ಮತ್ತು ಫಾತಿಮತ್ ಸಮಿಲ, ಆಯಿಷಾ ರೈಫಾ ಮತ್ತು ಫಾತಿಮಾ ರೌಲ ಹಾಗೂ ದುಲೈಕತ್ ರುಫಿದಾ ಮತ್ತು ಹಲೀಮತ್ ರುಫಿದಾ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವಳಿ ವಿದ್ಯಾರ್ಥಿಗಳಾಗಿದ್ದಾರೆ.