ಬೆಂಗಳೂರು: ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಅಳವಡಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತು ಕೋಲಾರದ ಕಾಂಗ್ರೆಸ್ ಮುಖಂಡ ನಿಂದ ದಂಡ ವಸೂಲಿ ಮಾಡಿ ಪ್ರಕರಣ ದಾಖಲಿಸುವಂತೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಬಸನಗೌಡ ಬಾದರ್ಲಿ ಅಧಿಕಾರ ಪ್ರಮಾಣ ಸ್ವೀಕಾರ ಕಾರ್ಯಕ್ರಮ ಗುರುವಾರ ನಡೆಯಿತು. ಕಾರ್ಯಕ್ರಮ ಬಗ್ಗೆ ಬಾದರ್ಲಿ ಅವರಿಗೆ ಶುಭ ಕೋರಿ ನಲಪಾಡ್ ವಿಧಾನಸೌಧ ಮುಂಭಾಗ ಬ್ಯಾನರ್ ಅಳವಡಿಸಿದ್ದರು.
ಇದು ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೆ ಬಂದಿದ್ದು, ಸಮ್ಮೇಳನ ಸಭಾಂಗಣಕ್ಕೆ ಆಗಮಿಸುತ್ತಿದ್ದು, ಯಾರೋ ಅದು ಬ್ಯಾನರ್ ಹಾಕಿದ್ದು ಎಂದು ಅಲ್ಲಿದ್ದ ನಲಪಾಡ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅಧಿಕಾರಿಯೊಬ್ಬರು ತಾವು ಬ್ಯಾನರ್ ಅಳವಡಿಸಬೇಡವೆಂದರೂ ಹಾಕಿದ್ದಾರೆ ಎಂದು ಹೇಳಿದಾಗ ಸಿಡಿಮಿಡಿಗೊಂಡ ಡಿಸಿಎಂ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿ ಎಂದು ಸೂಚನೆ ನೀಡಿದ್ದಾರೆ.