ರಿಸರ್ವ್ ಬ್ಯಾಂಕ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರಗಳು ಶೇಕಡಾ 4 ಮತ್ತು ರಿವರ್ಸ್ ರೆಪೊ ದರಗಳು ಶೇಕಡಾ 3.35 ರಷ್ಟಿರಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ರಿಸರ್ವ್ ಬ್ಯಾಂಕಿನ ಈ ನಿರ್ಧಾರದಿಂದ ಗೃಹ ಸಾಲ ಮತ್ತು ಕಾರು ಸಾಲದ ಇಎಂಐ ಕಡಿಮೆಯಾಗುವುದಿಲ್ಲ. ಆದ್ರೆ ಸ್ಥಿರ ಠೇವಣಿ ಇಡುವವರಿಗೆ ನೆಮ್ಮದಿ ಸುದ್ದಿಯಿದೆ. ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸಿದಾಗ, ಬ್ಯಾಂಕುಗಳು ಸಾಲದ ದರವನ್ನು ಕಡಿಮೆ ಮಾಡುತ್ತದೆ. ಆದರೆ ಅದನ್ನು ಸಮತೋಲನಗೊಳಿಸಲು ಸ್ಥಿರ ಠೇವಣಿಗಳ ದರವನ್ನು ಕಡಿಮೆ ಮಾಡುತ್ತದೆ.
ಹೆಚ್ಚಿನ ಬ್ಯಾಂಕುಗಳ ಗೃಹ ಸಾಲದ ದರಗಳು ಕೆಳಮಟ್ಟದಲ್ಲಿದೆ. ಒಂದು ವೇಳೆ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದರೆ, ಬ್ಯಾಂಕುಗಳು ಒತ್ತಡಕ್ಕೆ ಒಳಗಾಗುತ್ತಿದ್ದವು. ರೆಪೋ ದರ ಇಳಿಯುತ್ತಿದ್ದಂತೆ ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗುತ್ತಿದ್ದವು. ಇದನ್ನು ಸರಿ ಮಾಡಲು ಎಫ್‌ಡಿ ಮೇಲಿನ ಬಡ್ಡಿ ದರಗಳನ್ನು ಬ್ಯಾಂಕ್ ಗಳು ಕಡಿಮೆ ಮಾಡುತ್ತಿದ್ದವು. ಇದ್ರಿಂದ ಸ್ಥಿರ ಠೇವಣಿದಾರರಿಗೆ ಕಡಿಮೆ ಬಡ್ಡಿ ಸಿಗ್ತಿತ್ತು.
ಎಚ್‌ಡಿಎಫ್‌ಸಿ ಕೆಲವು ದಿನಗಳ ಹಿಂದೆ ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸಹ ಸ್ಥಿರ ಠೇವಣಿಗಳ ದರವನ್ನು ಹೆಚ್ಚಿಸಿದೆ. ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ವಿಭಿನ್ನ ಬಡ್ಡಿಯನ್ನು ನೀಡುತ್ತವೆ. ಅದು ಶೇಕಡಾ 2.5 ರಿಂದ ಶೇಕಡಾ 5.8 ವರೆಗೆ ಇರುತ್ತದೆ.