BIG BREAKING: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ 2 ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ 09-02-2021 4:50PM IST / No Comments / Posted In: Business, Latest News, Live News 2021-22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎರಡು ಸಾರ್ವಜನಿಕ ಬ್ಯಾಂಕ್ಗಳನ್ನ ಖಾಸಗೀಕರಣಗೊಳಿಸಿದ್ದನ್ನ ವಿರೋಧಿಸಿ ಬ್ಯಾಂಕ್ ಯೂನಿಯನ್ ಮಾರ್ಚ್ 15ರಂದು ಎರಡು ದಿನಗಳ ಪ್ರತಿಭಟನೆಗೆ ಕರೆ ನೀಡಿದೆ. ಕಳೆದ ವಾರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೂಡಿಕೆ ಯೋಜನೆಯ ಭಾಗವಾಗಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನ ಖಾಸಗೀಕರಣಗೊಳಿಸೋದಾಗಿ ಘೋಷಣೆ ಮಾಡಿದ್ದರು. ಈ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 14 ಸಾರ್ವಜನಿಕ ಬ್ಯಾಂಕ್ಗಳನ್ನ ಸರ್ಕಾರ ಖಾಸಗೀಕರಣಕ್ಕೆ ವಿಲೀನಗೊಳಿಸಿದಂತಾಗಿದೆ. ಈ ಸಂಬಂಧ ಮಂಗಳವಾರ ಸಭೆ ನಡೆಸಿದ ಬ್ಯಾಂಕ್ ಒಕ್ಕೂಟ ಕೇಂದ್ರ ಸರ್ಕಾರದ ಖಾಸಗೀಕರಣ ಘೋಷಣೆಯನ್ನ ವಿರೋಧಿಸಲು ನಿರ್ಧರಿಸಿದೆ. ಹೀಗಾಗಿ ಮಾರ್ಚ್ 15 ಹಾಗೂ 16ರಂದು ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಹೆಚ್ ವೆಂಕಟಾಚಲಂ ತಿಳಿಸಿದ್ದಾರೆ. #JustIn | Bank unions call for strike on Mar 15,16 against privatisation of banks (From Agencies) pic.twitter.com/XzRzqYL8uP — ET NOW (@ETNOWlive) February 9, 2021