ಆರ್ಥಿಕ ವ್ಯವಹಾರ ನಡೆಯಲು ಬ್ಯಾಂಕ್ ಸೇವೆ ಅತ್ಯಮೂಲ್ಯ. ಆನ್ ಲೈನ್ ಸೇವೆಗಳಿದ್ದರೂ ಖುದ್ದು ಬ್ಯಾಂಕ್ ಶಾಖೆಯಲ್ಲಿ ಕೆಲಸಗಳಿದ್ದೇ ಇರುತ್ತವೆ. ಅಂದಹಾಗೆ ಜುಲೈನಲ್ಲಿ ಅರ್ಧದಷ್ಟು ದಿನ ವಿವಿಧ ಕಾರಣಕ್ಕೆ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟಿರುತ್ತವೆ. ಅಂದರೆ ಕರ್ನಾಟಕದಲ್ಲಿ ರಜೆ ಇರಬೇಕೆಂದೇನು ಇಲ್ಲ.
ಈ ತಿಂಗಳಿನಲ್ಲಿ ಕೆಲವು ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ರಜಾದಿನಗಳನ್ನು ಮೂರು ವರ್ಗಗಳ ಅಡಿಯಲ್ಲಿ ನಿರ್ಧರಿಸುತ್ತದೆ. ಆ ಪ್ರಕಾರ ರಜೆಯ ದಿನಗಳು ನಿರ್ಧರಿತವಾಗಿವೆ.
ಜುಲೈನಲ್ಲಿ ಬ್ಯಾಂಕ್ ರಜಾದಿನಗಳು:
ಜುಲೈ 1 (ರಥ / ಕಾಂಗ್ ಯಾತ್ರಾ): ಭುವನೇಶ್ವರ ಮತ್ತು ಇಂಫಾಲ್‌ನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
ಜುಲೈ 3: ಭಾನುವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 7 (ಖರ್ಚಿ ಪೂಜೆ): ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 9 (ಎರಡನೇ ಶನಿವಾರ, ಬಕ್ರೀದ್): ಎರಡನೇ ಶನಿವಾರದ ಹೊರತಾಗಿ, ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಬಕ್ರೀದ್‌ನಿಂದಾಗಿ ಕೇರಳದ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಜುಲೈ 10: ಭಾನುವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 11 (ಈದ್-ಉಲ್-ಅಧಾ): ದೇಶದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ
ಜುಲೈ 13 (ಭಾನು ಜಯಂತಿ): ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಜುಲೈ 14 (ಬೆಹ್ ದಿಯೆಂಕ್ಲಾಮ್): ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 16 (ಹರೇಲಾ): ಡೆಹ್ರಾಡೂನ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಜುಲೈ 17: ಭಾನುವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 23: ನಾಲ್ಕನೇ ಶನಿವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 24 (ಭಾನುವಾರ): ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 26 (ಕೇರ್ ಪೂಜೆ): ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 31: ಭಾನುವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.