ನವದೆಹಲಿ: ಬ್ಯಾಂಕ್ ಗಳಿಗೆ ವಂಚನೆ ಎಸಗಿ ಪರಾರಿಯಾಗಿದ್ದ ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ ಹಾಗೂ ಮೆಹುಲ್ ಚೋಕ್ಸಿ ಅವರ 18.170 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿರುವ ಜಾರಿ ನಿರ್ದೇಶನಾಯಲ (ಇಡಿ) ಬ್ಯಾಂಕ್ ಗಳಿಗೆ ವರ್ಗಾವಣೆ ಮಾಡಿದೆ.
ನೀರವ್ ಮೋದಿ, ಮಲ್ಯ ಹಾಗೂ ಮೆಹುಲ್ ಚೋಕ್ಸಿಗೆ ಸಾಲ ನೀಡಿ ನಷ್ಟಕ್ಕೀಡಾಗಿದ್ದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ 9,371 ಕೋಟಿ ಮೌಲ್ಯದ ಆಸ್ತಿಗಳನ್ನು ಹಸ್ತಾಂತರಿಸಲಾಗಿದೆ ಎಂದು ಇಡಿ ತಿಳಿಸಿದೆ.
ಈಗ ಬ್ಯಾಂಕ್ ಗಳು ಮೂವರು ಉದ್ಯಮಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ಆದೇಶದ ಪ್ರಕಾರ ಹರಾಜು ಹಾಕಿ ಸಾಲದ ಹಣ ವಸೂಲಿಗೆ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ.