ನೀವು ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದಲ್ಲಿ, ಇಲ್ಲೊಂದು ಮಹತ್ವದ ವಿಚಾರವಿದೆ. ಸೆಪ್ಟೆಂಬರ್ 1, 2021ರಿಂದ ಸಕರಾತ್ಮಕ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಿರುವ ಆಕ್ಸಿಸ್ ಬ್ಯಾಂಕ್ ಈ ವಿಷಯವಾಗಿ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ವಿಚಾರ ಮುಟ್ಟಿಸುತ್ತಿದೆ.
50,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಚೆಕ್ ವಿತರಿಸುವ ವ್ಯಕ್ತಿ ತನ್ನ ವಿವರಗಳ ಬಗ್ಗೆ ಮಹತ್ವದ ವಿಚಾರಗಳನ್ನು ಇನ್ನೊಮ್ಮೆ ಖಾತ್ರಿ ಮಾಡಬೇಕಾಗಿ ಬರುತ್ತದೆ. ಖಾತೆದಾರರ ಇಚ್ಛೆಯನುಸಾರ ಈ ಸೌಲಭ್ಯವನ್ನು ಒದಗಿಸುವ ಬ್ಯಾಂಕುಗಳು ಐದು ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತಗಳ ಚೆಕ್‌ಗಳಿಗೆ ಸಕಾರಾತ್ಮಕ ಪಾವತಿಯನ್ನು ಕಡ್ಡಾಯ ಮಾಡಲಾಗುತ್ತದೆ.
ಈ ಕುರಿತಂತೆ ತಂತಮ್ಮ ಗ್ರಾಹಕರಿಗೆ ಎಸ್‌ಎಂಎಸ್ ಅಲರ್ಟ್‌ಗಳು, ಪೋರ್ಟಲ್, ಅಂತರ್ಜಾಲ ಬ್ಯಾಂಕಿಂಗ್‌ಗಳ ಮೂಲಕ ಜಾಗೃತಿ ಮೂಡಿಸಲು ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ.
ದೊಡ್ಡ ಮೊತ್ತದ ಚೆಕ್‌ಗಳ ಪಾವತಿ ಮಾಡುವ ವೇಳೆ ಖಾತೆದಾರರ ವಿವರಗಳನ್ನು ಪುನರ್‌ಪರಿಶೀಲನೆ ಮಾಡಿಕೊಳ್ಳಬೇಕಾಗುವ ಈ ವ್ಯವಸ್ಥೆಯನ್ನು ಜನವರಿ 1, 2021ರಿಂದ ಅನುಷ್ಠಾನಕ್ಕೆ ತರಲಾಗಿದೆ. ಈ ಪ್ರಕ್ರಿಯೆಯ ಅಡಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಚೆಕ್ ವಿತರಿಸುವಾಗ, ಹಣ ಹಿಂಪಡೆಯುವ ಬ್ಯಾಂಕ್‌ಗೆ ಚೆಕ್ ನೀಡಿದ ಪಾರ್ಟಿಯ ಬಗೆಗಿನ ವಿವರಗಳನ್ನು ಮರುಪರಿಶೀಲನೆ ಮಾಡಲಾಗುತ್ತದೆ.
ಸಕಾರಾತ್ಮಕ ಪಾವತಿಗೆ ಅಗ್ಯತವಿರುವ ಸೌಲಭ್ಯವನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸಿಟಿಎಸ್ ಪ್ಲಾಟ್‌ಫಾರಂ ಅಭಿವೃದ್ಧಿಪಡಿಸುತ್ತಿದೆ.