ಖ್ಯಾತ ನಟಿಯೊಬ್ಬಳನ್ನು ಭಯಾನಕವಾಗಿ ಹತ್ಯೆ ಮಾಡಿದ ಘಟನೆ ಎಲ್ಲರನ್ನು ದಂಗಾಗಿಸಿದೆ. 26 ವರ್ಷದ ನಟಿಯನ್ನು ಮೊದಲು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ನಂತ್ರ ದೇಹವನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಗೋಣಿ ಚೀಲದಲ್ಲಿ ತುಂಬಿ ರಸ್ತೆ ಬದಿಗೆ ಎಸೆಯಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಬರ್ಬರವಾಗಿ ಸಾವು ಕಂಡ ನಟಿ ಹೆಸರು ಕರೋಲ್ ಮಾಲ್ಟೆಸಿ. ಆರೋಪಿಯ ಹೆಸರು ಡೇವಿಡ್ ಫೊಂಟಾನಾ. ಆತನ ವಯಸ್ಸು 43 ವರ್ಷ.
ಘಟನೆ ಇಟಲಿಯಲ್ಲಿ ನಡೆದಿದೆ. ಲೊಂಬಾರ್ಡಿ ಪ್ರದೇಶದ ಪಾಲಿನ್ ಗ್ರಾಮದ ಬಳಿಯ ಪರ್ವತದ ಮೇಲೆ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಮೊದಲು ಸುತ್ತಿಗೆಯಿಂದ ನಟಿಗೆ ಹೊಡೆದಿದ್ದಾನೆ. ಆಕೆ ಗುರುತು ಮರೆಮಾಚಲು ಆಕೆ ದೇಹವನ್ನು ಸುಟ್ಟು ಹಾಕುವ ಪ್ರಯತ್ನವೂ ನಡೆದಿದೆ. ನಂತರ ದೇಹವನ್ನು ತುಂಡುಗಳಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದ ಪೊಲೀಸರು ಮಂಗಳವಾರ ಡೇವಿಡ್ ಫೊಂಟಾನಾ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಸೇರಿದಂತೆ ಅನೇಕ ದೂರು ದಾಖಲಾಗಿದೆ. ಜನವರಿಯಲ್ಲೇ ನಟಿಯ ಹತ್ಯೆ ಮಾಡಿದ್ದೆ. ಕೆಲ ದಿನಗಳ ಕಾಲ ಶವವನ್ನು ಫ್ರಿಜ್ ನಲ್ಲಿ ಇಟ್ಟಿದ್ದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.