alex Certify ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಖಾತೆಯಿದ್ರೆ ಸಿಗಲಿದೆ 1 ಕೋಟಿ ವಿಮೆ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಖಾತೆಯಿದ್ರೆ ಸಿಗಲಿದೆ 1 ಕೋಟಿ ವಿಮೆ ಲಾಭ

ಬ್ಯಾಂಕ್ ಆಫ್ ಇಂಡಿಯಾ, ವಿಶೇಷ ಯೋಜನೆಯನ್ನು ಆರಂಭಿಸಿದೆ. ಸರ್ಕಾರಿ ಉದ್ಯೋಗಿಗಳಿಗಾಗಿ ಬ್ಯಾಂಕ್ ಆಫ್ ಇಂಡಿಯಾ ಈ ವಿಶೇಷ ಯೋಜನೆ ಶುರು ಮಾಡಿದೆ. ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿಯಲ್ಲಿ, ಉದ್ಯೋಗಿಗಳು 1 ಕೋಟಿ ರೂಪಾಯಿವರೆಗಿನ ಉಚಿತ ಏರ್ ಅಪಘಾತ ಪ್ರಯೋಜನಗಳನ್ನು ಪಡೆಯಬಹುದು.

ಬ್ಯಾಂಕ್ ಆಫ್ ಇಂಡಿಯಾ, ತನ್ನ ಅಧಿಕೃತ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. ಬ್ಯಾಂಕ್ ಆಫ್ ಇಂಡಿಯಾ, ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ಈ ಯೋಜನೆಯಡಿ ಮೂರು ವಿಧದ ವೇತನ ಖಾತೆ ಸೌಲಭ್ಯವನ್ನು ಒದಗಿಸುತ್ತಿದೆ. ಈ ಯೋಜನೆಯು ಪ್ಯಾರಾ ಮಿಲಿಟರಿ ಪಡೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ವಿಶ್ವವಿದ್ಯಾಲಯ, ಕಾಲೇಜು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ನೀಡುತ್ತಿದೆ.

ಈ ಯೋಜನೆಯಡಿ 30 ಲಕ್ಷ ರೂಪಾಯಿಗಳ ಗುಂಪು ವೈಯಕ್ತಿಕ ಮರಣ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದಲ್ಲದೇ, 1 ಕೋಟಿ ಉಚಿತ ವಾಯು ಅಪಘಾತ ವಿಮೆಯನ್ನು ವೇತನ ಖಾತೆದಾರರಿಗೆ ನೀಡಲಾಗುತ್ತಿದೆ.

ಖಾಸಗಿ ವಲಯದ ಉದ್ಯೋಗಿಗಳು, ಬ್ಯಾಂಕ್ ಆಫ್ ಇಂಡಿಯಾದ ಸಂಬಳ ಖಾತೆಯ ಲಾಭವನ್ನು ಪಡೆಯಬಹುದು. ತಿಂಗಳಿಗೆ 10,000 ರೂಪಾಯಿ ಗಳಿಸುವವರು ಈ ಯೋಜನೆಯಡಿ ವೇತನ ಖಾತೆಯನ್ನು ತೆರೆಯಬಹುದು. ಇದಕ್ಕೆ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ ಇಲ್ಲ. ಸಂಬಳ ಖಾತೆದಾರರಿಗೆ 5 ಲಕ್ಷ ರೂಪಾಯಿಗಳ ಗುಂಪು ವೈಯಕ್ತಿಕ ಅಪಘಾತ ಮರಣ ವಿಮಾ ರಕ್ಷಣೆ ಸಿಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...