ಬ್ಯಾಂಕ್ ಆಫ್ ಬರೋಡಾ ವಿವಿಧ ವಿಭಾಗಗಳಲ್ಲಿ 518 ವೃತ್ತಿಪರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹಿಂದೆ ಮಾರ್ಚ್ 11, 2025 ರಂದು ಕೊನೆಗೊಳ್ಳಬೇಕಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮಾರ್ಚ್ 21, 2025 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಅಭಿಯಾನವು ಮಾಹಿತಿ ತಂತ್ರಜ್ಞಾನ, ವ್ಯಾಪಾರ ಮತ್ತು ವಿದೇಶೀ ವಿನಿಮಯ, ಅಪಾಯ ನಿರ್ವಹಣೆ ಮತ್ತು ಭದ್ರತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಒಟ್ಟು 518 ಹುದ್ದೆಗಳಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ 350, ವ್ಯಾಪಾರ ಮತ್ತು ವಿದೇಶೀ ವಿನಿಮಯ ವಿಭಾಗದಲ್ಲಿ 97, ಅಪಾಯ ನಿರ್ವಹಣೆ ವಿಭಾಗದಲ್ಲಿ 35 ಮತ್ತು ಭದ್ರತಾ ವಿಭಾಗದಲ್ಲಿ 36 ಹುದ್ದೆಗಳು ಖಾಲಿ ಇವೆ.
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ಆಗಿದ್ದರೆ, SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ. ನಿಗದಿಪಡಿಸಲಾಗಿದೆ. ಪ್ರತಿ ಹುದ್ದೆಗೆ ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿಗಳು ಬದಲಾಗುತ್ತವೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ ಒಳಗೊಂಡಿರಬಹುದು. ಅರ್ಹ ಅಭ್ಯರ್ಥಿಗಳು ಮಾರ್ಚ್ 21 ರೊಳಗೆ ಅರ್ಜಿ ಸಲ್ಲಿಸಬೇಕು.