ಕೊರೊನಾ ಕಾಲದಲ್ಲಿ ಜನರಿಗೆ ವಿಮೆ ಮಹತ್ವ ಅರ್ಥವಾಗಿದೆ. ಒಂದೊಳ್ಳೆ ವಿಮೆಯತ್ತ ಜನರು ಗಮನ ಹರಿಸುತ್ತಿದ್ದಾರೆ. ಸರ್ಕಾರ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಕಡಿಮೆ ಹಣಕ್ಕೆ ಸರ್ಕಾರ ವಿಮೆ ಸೌಲಭ್ಯ ನೀಡ್ತಿದೆ. ಸರ್ಕಾರ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಲ್ಲಿ 4 ಲಕ್ಷ ರೂಪಾಯಿವರೆಗೆ ಪ್ರಯೋಜನ ನೀಡ್ತಿದೆ.
ಬ್ಯಾಂಕ್ ಆಫ್ ಬರೋಡಾ ಗ್ರಾಹಕರು, ಸುಲಭವಾಗಿ ಈ ಯೋಜನೆಯ ಲಾಭವನ್ನು ಪಡೆಯಬಹುದು. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮೇಲೆ ವಾರ್ಷಿಕವಾಗಿ ಒಟ್ಟು 342 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಅಂದ್ರೆ ತಿಂಗಳಿಗೆ ಕೇವಲ 28 ರೂಪಾಯಿ ಜಮಾ ಮಾಡಿದ್ರೆ ಸಾಕು.
’ಪಂಚ್’ ಮೂಲಕ ಮಿನಿ SUV ಸೆಗ್ಮೆಂಟ್‌ಗೆ ಕಾಲಿಟ್ಟ ಟಾಟಾ
ಎಸ್ಬಿಐ ಗ್ರಾಹಕರು ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದು. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಈ ಎರಡು ಯೋಜನೆಗಳ ಬಗ್ಗೆ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಮಾಹಿತಿ ನೀಡಿದೆ. ಅಗತ್ಯಕ್ಕೆ ಅನುಗುಣವಾಗಿ ವಿಮೆ ಮಾಡಿಸಿ ಮತ್ತು ಚಿಂತೆಯಿಲ್ಲದ ಜೀವನ ನಡೆಸಿ ಎಂದು ಎಸ್ಬಿಐ ಟ್ವೀಟ್ ಮಾಡಿದೆ. ಉಳಿತಾಯ ಬ್ಯಾಂಕ್ ಖಾತೆದಾರರಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಪ್ರೀಮಿಯಂ ಕಡಿತಗೊಳ್ಳುತ್ತದೆ ಎಂದು ಬ್ಯಾಂಕ್ ಹೇಳಿದೆ.
‘ಜೀವನದೊಂದಿಗೆ ಜೀವವೂ ಮುಖ್ಯ…’; ಎಲ್ಲರನ್ನು ಆಕರ್ಷಿಸಿದ ಸಿಎಂ ದಸರಾ ಸಂದೇಶ
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಅಂಗವಿಕಲರಾದ್ರೆ 2 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಈ ಯೋಜನೆಯಡಿಯಲ್ಲಿ, ವಿಮಾದಾರರು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ 1 ಲಕ್ಷ ರೂಪಾಯಿ ನೀಡಲಾಗುವುದು. 18 ರಿಂದ 70 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ವಿಮೆ ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ 12 ರೂಪಾಯಿ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ, ನಾಮನಿರ್ದೇಶಿತರು ವಿಮಾದಾರನ ಸಾವಿನ ನಂತ್ರ 2 ಲಕ್ಷ ರೂಪಾಯಿ ಪಡೆಯುತ್ತಾರೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಗೆ ಕೇವಲ 330 ರೂಪಾಯಿ ವಾರ್ಷಿಕ ಪ್ರೀಮಿಯಂ ಪಾವತಿಸಬೇಕಾಗುತ್ತದೆ.