ಕೊರೊನಾ ಸಾಂಕ್ರಾಮಿಕ ದಾಳಿಯಿಂದಾಗಿ ಎಲ್ಲರೂ ಆನ್ಲೈನ್ ಹಣ ಪಾವತಿ, ಡಿಜಿಟಿಲ್ ವಹಿವಾಟು, ಯುಪಿಐ ಪಾವತಿ, ಆರ್ಟಿಜಿಎಸ್ನಂತಹ ಡಿಜಿಟಲ್ ಮಾಧ್ಯಮಗಳ ಕಡೆಗೆ ವಾಲುತ್ತಿದ್ದಾರೆ. ದುಡ್ಡನ್ನು ಕೈಗಳಿಂದ ಮುಟ್ಟುವುದೇ ಕಡಿಮೆ ಆಗುತ್ತಿದೆ. ಇದೊಂದು ರೀತಿಯಲ್ಲಿ ಲೆಕ್ಕಾಚಾರಕ್ಕೂ ಸುಲಭ ಮತ್ತು ಬ್ಯಾಂಕ್ಗಳಿಗೂ ಸರತಿ ಸಾಲಿನಲ್ಲಿ ತನ್ನ ಗ್ರಾಹಕರನ್ನು ನಿಲ್ಲಿಸಿಕೊಳ್ಳುವ ಮುಜುಗರ ತಪ್ಪುತ್ತದೆ.
ಆ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ’ಉಳಿಸಿ’, ’ಹೂಡಿಕೆ ಮಾಡಿ’, ಸಾಲ/ವಿತ್ಡ್ರಾ’, ಖರೀದಿ ಎಂಬ ನಾಲ್ಕು ಸೌಲಭ್ಯಗಳುಳ್ಳ ’ಬಾಬ್ ವರ್ಲ್ಡ್’ ಆ್ಯಪ್ಗೆ ಚಾಲನೆ ನೀಡಿದೆ. ಇದು ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ವೇದಿಕೆಯಾಗಿದೆ. ಹಲವು ಸೇವೆಗಳು ಈ ಆ್ಯಪ್ನಲ್ಲಿ ಗ್ರಾಹಕರಿಗೆ ಲಭ್ಯವಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕರು ಬ್ಯಾಂಕ್ನ ಶೇ. 95 ರಷ್ಟು ವಿವಿಧ ರೀತಿಯ ಸೇವೆಗಳನ್ನು ಇಲ್ಲಿಯೇ ಪಡೆಯಬಹುದಾಗಿದೆ.
BIG NEW: ಸಹೋದ್ಯೋಗಿಗೆ ಮುತ್ತಿಟ್ಟ ಪ್ರಕರಣ; ಆರೋಗ್ಯ ಸಚಿವರ ರಾಜೀನಾಮೆ
ಕೇವಲ 10 ನಿಮಿಷಗಳಲ್ಲಿ ಬ್ಯಾಂಕ್ ಆಫ್ ಬರೋಡಾದ ಡಿಜಿಟಲ್ ಅಕೌಂಟ್ ಆ್ಯಪ್ ಮೂಲಕ ತೆರೆಯಬಹುದು. ಕೂಡಲೇ ನಿಮಗೆ ಡೆಬಿಟ್ ಕಾರ್ಡ್ ಕೂಡ ನೀಡಲಾಗುತ್ತದೆ. ತ್ವರಿತ ಸಾಲದ ಯೋಜನೆಗಳನ್ನು ಕೂಡ ಇಲ್ಲಿಯೇ ಪಡೆಯಲು ಅವಕಾಶವಿದೆ. ನಿಮ್ಮ ಡಿಜಿಟಲ್ ಖಾತೆಗೆ ಕೆಲವೇ ಗಂಟೆಗಳಲ್ಲಿ ಸಾಲದ ಮೊತ್ತವು ಜಮೆಯೂ ಆಗುತ್ತದೆ.