ನವದೆಹಲಿ: ಜುಲೈ 1 ರಿಂದ ಬ್ಯಾಂಕ್ ಆಫ್ ಬರೋಡಾ ಖಾತೆದಾರರು ಬದಲಾದ IFSC ಕೋಡ್ ಬಳಸುವಂತೆ ಬ್ಯಾಂಕಿನಿಂದ ಸೂಚನೆ ನೀಡಲಾಗಿದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾದ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರು ಬದಲಾದ ಹೊಸ IFSC ಕೋಡ್ ಬಳಸುವಂತೆ ಬ್ಯಾಂಕ್ ಆಫ್ ಬರೋಡಾದಿಂದ ಖಾತೆದಾರರಿಗೆ ಸಲಹೆ ನೀಡಲಾಗಿದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾದ ಬ್ಯಾಂಕ್ ಖಾತೆದಾರರಿಗೆ ಹೊಸ ಖಾತೆ ಸಂಖ್ಯೆಯನ್ನು ನೀಡಲಾಗಿದೆ. ಚೆಕ್ ಬುಕ್ ಮತ್ತು ಪಾಸ್ ಬುಕ್ ಗಳನ್ನು ಕೂಡ ಬದಲಾವಣೆ ಮಾಡಿಕೊಡಲಾಗಿದೆ. ಈಗ ಜುಲೈ 1 ರಿಂದ ಅನ್ವಯವಾಗುವಂತೆ ಹೊಸ ಬದಲಾದ IFSC ಕೋಡ್ BARB0 ** ಗಮನಿಸಿ ಬಳಸಬೇಕು. ಇಲ್ಲದಿದ್ದರೆ, ನಿಮ್ಮ ಆನ್ಲೈನ್ ವ್ಯವಹಾರ ಸೇರಿ ಸಂಬಂಧಿತ ವಹಿವಾಟುಗಳಿಗೆ ಸಮಸ್ಯೆಯಾಗಬಹುದು ಎಂದು ಹೇಳಲಾಗಿದೆ.