ಮುಂದಿನ ವಾರ ಬ್ಯಾಂಕ್ ಕೆಲಸದ ಪ್ಲಾನ್ ನಲ್ಲಿದ್ದರೆ ಈ ವಾರವೇ ಆ ಕೆಲಸವನ್ನು ಮುಗಿಸಿ. ಯಾಕೆಂದ್ರೆ ಮುಂದಿನ ವಾರ ಬ್ಯಾಂಕ್ ಗಳಿಗೆ ನಾಲ್ಕು ದಿನಗಳ ಕಾಲ ರಜೆಯಿರಲಿದೆ. ಹಾಗಾಗಿ ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಪ್ಲಾನ್ ಮಾಡಿ.
ಮುಂದಿನ ವಾರ ಜೂನ್ 25 ರಿಂದ ಜೂನ್ 30 ರವರೆಗೆ 4 ದಿನಗಳವರೆಗೆ ಬ್ಯಾಂಕ್ ರಜೆಯಿರಲಿದೆ. ಆರ್‌ಬಿಐನ ಬ್ಯಾಂಕ್ ರಜೆ ಕ್ಯಾಲೆಂಡರ್ ಪ್ರಕಾರ, ಗುರು ಹರ್ ಗೋಬಿಂದ್ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಜಮ್ಮು ಮತ್ತು ಶ್ರೀನಗರದ ಬ್ಯಾಂಕುಗಳು ಜೂನ್ 25 ರಂದು ಮುಚ್ಚಿರಲಿವೆ. ಜೂನ್ 26 ನಾಲ್ಕನೇ ಶನಿವಾರ. ಹಾಗಾಗಿ ದೇಶಾದ್ಯಂತ ಬ್ಯಾಂಕುಗಳು ರಜೆಯಿರಲಿವೆ. ಮರುದಿನ ಭಾನುವಾರ ರಜೆ.
ಇದರ ನಂತರ ಜೂನ್ 28 ಮತ್ತು ಜೂನ್ 29 ರಂದು ಬ್ಯಾಂಕ್ ಬಾಗಿಲು ತೆರೆಯಲಿದೆ. ಈ ಎರಡು ದಿನಗಳಲ್ಲಿ ಬ್ಯಾಂಕ್ ಕೆಲಸವನ್ನು ಮುಗಿಸಿ. ಜೂನ್ 30 ರಂದು ಅಂದರೆ ಬುಧವಾರ ಬ್ಯಾಂಕ್ ಬಂದ್ ಆಗಲಿದೆ. ಜೂನ್ 30 ರಂದು ಮೆಜೋರಾಂನ ಇಜ್ವಾಲ್ ನಲ್ಲಿ ಬ್ಯಾಂಕ್ ಗಳಿಗೆ ರಜೆ.
ಜೂನ್ ತಿಂಗಳಲ್ಲಿ ಒಟ್ಟು 9 ದಿನ ಬ್ಯಾಂಕ್ ರಜೆಯಿರಲಿದೆ. ಈಗಾಗಲೇ ಐದು ರಜಾದಿನಗಳು ಮುಗಿದಿವೆ. ಸ್ಥಳೀಯ ಹಬ್ಬ, ಕಾರ್ಯಕ್ರಮಗಳಡಿ ರಜೆ ನೀಡಲಾಗುತ್ತದೆ. ಭಾನುವಾರ ಹಾಗೂ ಶನಿವಾರ ಸಾಮಾನ್ಯವಾಗಿ ಎಲ್ಲ ರಾಜ್ಯಗಳ ಬ್ಯಾಂಕ್ ಗಳಿಗೆ ರಜೆಯಿರಲಿದೆ. ಉಳಿದ ರಜೆಗಳು ಆಯಾ ರಾಜ್ಯವನ್ನು ಅವಲಂಬಿಸಿರುತ್ತದೆ.